ಬಾಗ್ದಾದ್(ಇರಾಕ್):ಸ್ಫೋಟಕಗಳನ್ನು ತುಂಬಿದ ಡ್ರೋನ್‌ಗಳು ಉತ್ತರ ಇರಾಕ್‌ನಲ್ಲಿರುವ ಇರ್ಬಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದ್ದು, ಯಾವುದೇ ಸಾವು-ನೋವು, ನಷ್ಟ ಉಂಟಾಗಿಲ್ಲ ಎಂದು ಭದ್ರತಾ ಪಡೆಗಳು ಮತ್ತು ಅಧಿಕಾರಿಗಳು ಮಾಹಿತಿ ನೀಡಿವೆ.
ಅಮೆರಿಕ ನೇತೃತ್ವದ ಒಕ್ಕೂಟ ಪಡೆಗಳು ಇಲ್ಲಿದ್ದು, ಸ್ಫೋಟಕಗಳನ್ನು ಹೊತ್ತ ಎರಡು ಡ್ರೋನ್‌ಗಳು ಕುರ್ದಿಷ್ ಅರೆಸ್ವಾಯುತ್ತ ಪ್ರದೇಶದಲ್ಲಿದ್ದ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿವೆ ಎಂದು ಕುರ್ದಿಷ್ನ ಭಯೋತ್ಪಾದನಾ ನಿಗ್ರಹ ದಳ ಮಾಹಿತಿ ನೀಡಿದೆ.
ದಾಳಿಯು ವಿಮಾನ ನಿಲ್ದಾಣದ ಹೊರಗೆ ಸಂಭವಿಸಿದೆ. ಇದರಿಂದ ಯಾವುದೇ ವಿಮಾನಕ್ಕೂ ಹಾನಿಯಾಗಿಲ್ಲ. ಈಗಲೂ ವಿಮಾನ ನಿಲ್ದಾಣ ತೆರೆದಿದ್ದು, ಕುರ್ದಿಷ್ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯಾ ಲಾಕ್ ಘಪುರಿ ತಿಳಿಸಿದ್ದಾರೆ.