ಜೆರುಸಲೆಂ (ಇಸ್ರೇಲ್):ಕೊರೊನಾ ವಿರುದ್ಧದ ಭಾರತದ ಹೋರಾಟದಲ್ಲಿ ಸಹಾಯ ಮಾಡಲು ಇಸ್ರೇಲ್ ವಾರ ಪೂರ್ತಿ ಭಾರತಕ್ಕೆ ಜೀವ ಉಳಿಸುವ ಸಾಧನಗಳನ್ನು ಕಳುಹಿಸಿಕೊಡಲು ನಿರ್ಧರಿಸಿದೆ.
ಭಾರತದ ಕೊರೊನಾ ಹೋರಾಟಕ್ಕೆ ಇಸ್ರೇಲ್ ಸಹಾಯಹಸ್ತ - ವೈದ್ಯಕೀಯ ಉಪಕರಣ ಪೂರೈಕೆ
ಇಂದಿನಿಂದ ವಾರ ಪೂರ್ತಿ ಆಮ್ಲಜನಕ ಉತ್ಪಾದಕಗಳು, ರೆಸ್ಪರೇಟರ್ಗಳು ಸೇರಿದಂತೆ ಹಲವು ವೈದ್ಯಕೀಯ ಸಾಮಗ್ರಿಗಳನ್ನು ಇಸ್ರೇಲ್ ದೇಶದ ಭಾರತಕ್ಕೆ ಕಳುಹಿಸಿಕೊಡಲಿದೆ.

ಭಾರತ - ಇಸ್ರೇಲ್
ಭಾರತಕ್ಕೆ ಕಳುಹಿಸಬೇಕಾದ ವೈದ್ಯಕೀಯ ಉಪಕರಣಗಳಲ್ಲಿ ಆಮ್ಲಜನಕ ಉತ್ಪಾದಕಗಳು ಮತ್ತು ರೆಸ್ಪರೇಟರ್ಗಳು ಸೇರಿವೆ. ಮಂಗಳವಾರದಿಂದ ಪ್ರಾರಂಭವಾಗುವ ಈ ಕಾರ್ಯ ವಾರ ಪೂರ್ತಿ ಸರಣಿ ವಿಮಾನಗಳ ಮೂಲಕ ನಡೆಯಲಿದೆ ಎಂದು ಇಸ್ರೇಲ್ ತಿಳಿಸಿದೆ.
"ಭಾರತವು ಇಸ್ರೇಲ್ನ ಆಪ್ತ ಮತ್ತು ಪ್ರಮುಖ ಸ್ನೇಹಿತರಲ್ಲೊಬ್ಬ. ಸಂಕಷ್ಟದ ಸಂದರ್ಭದಲ್ಲಿ ನಾವು ಭಾರತದೊಂದಿಗೆ ನಿಲ್ಲುತ್ತೇವೆ. ನಮ್ಮ ಭಾರತೀಯ ಸಹೋದರ ಸಹೋದರಿಯರಿಗೆ ಜೀವ ಉಳಿಸುವ ಸಾಧನಗಳನ್ನು ಕಳುಹಿಸುತ್ತಿದ್ದೇವೆ"ಎಂದು ವಿದೇಶಾಂಗ ಸಚಿವ ಗಬಿ ಅಶ್ಕೆನಾಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.