ಕರ್ನಾಟಕ

karnataka

ETV Bharat / international

ಚೀನಾದಲ್ಲಿ ಮತ್ತೆ ಕೊರೊನಾ ಉಲ್ಬಣ: ಶೆನ್‌ಜೆನ್‌ನ ದಕ್ಷಿಣದ ವ್ಯಾಪಾರ ಕೇಂದ್ರದಲ್ಲಿ ಲಾಕ್​ಡೌನ್​ - ಚೀನಾದಲ್ಲಿ ಮತ್ತೇ ಕೊರೊನಾ ಉಲ್ಬಣ

60 ಹೊಸ ಪ್ರಕರಣಗಳು ಭಾನುವಾರ ವರದಿಯಾದ ನಂತರ ಹಾಂಗ್ ಕಾಂಗ್‌ನಲ್ಲಿರುವ ಹಣಕಾಸು ಮತ್ತು ತಂತ್ರಜ್ಞಾನ ಕೇಂದ್ರವಾದ ಶೆನ್‌ಜೆನ್‌ನಲ್ಲಿರುವ ಪ್ರತಿಯೊಬ್ಬರೂ ಮೂರು ಸುತ್ತಿನ ಪರೀಕ್ಷೆಗೆ ಒಳಗಾಗಿದ್ದಾರೆ.

ಚೀನಾದಲ್ಲಿ ಮತ್ತೇ ಕೊರೊನಾ ಉಲ್ಬಣ: ಶೆನ್‌ಜೆನ್‌ನ ದಕ್ಷಿಣದ ವ್ಯಾಪಾರ ಕೇಂದ್ರದಲ್ಲಿ ಲಾಕ್​ಡೌನ್​
ಚೀನಾದಲ್ಲಿ ಮತ್ತೇ ಕೊರೊನಾ ಉಲ್ಬಣ: ಶೆನ್‌ಜೆನ್‌ನ ದಕ್ಷಿಣದ ವ್ಯಾಪಾರ ಕೇಂದ್ರದಲ್ಲಿ ಲಾಕ್​ಡೌನ್​

By

Published : Mar 13, 2022, 9:27 PM IST

ಬೀಜಿಂಗ್: ಚೀನಾ ಸರ್ಕಾರವು 17.5 ಮಿಲಿಯನ್ ಜನರಿರುವ ನಗರವಾದ ಶೆನ್‌ಜೆನ್‌ನ ದಕ್ಷಿಣದ ವ್ಯಾಪಾರ ಕೇಂದ್ರವನ್ನು ಮುಚ್ಚುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ದಾಪುಗಾಲಿರಿಸಿದೆ. ಇಲ್ಲಿಂದ ಬಸ್ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಶಾಂಘೈಗೆ ಪ್ರವೇಶವನ್ನು ನಿರ್ಬಂಧಿಸಿದೆ.

ಹೊಸ ಪ್ರಕರಣ ಕಂಡು ಬಂದ ಹಿನ್ನೆಲೆ ಹಾಂಗ್ ಕಾಂಗ್‌ನಲ್ಲಿರುವ ಹಣಕಾಸು ಮತ್ತು ತಂತ್ರಜ್ಞಾನ ಕೇಂದ್ರವಾದ ಶೆನ್‌ಜೆನ್‌ನಲ್ಲಿರುವ ಪ್ರತಿಯೊಬ್ಬರೂ ಮೂರು ಸುತ್ತಿನ ಪರೀಕ್ಷೆಗೆ ಒಳಗಾಗಿದ್ದಾರೆ. ಆಹಾರ, ಇಂಧನ ಮತ್ತು ಇತರ ಅಗತ್ಯಗಳನ್ನು ಪೂರೈಸುವ ವ್ಯವಹಾರಗಳನ್ನು ಹೊರತುಪಡಿಸಿ ಎಲ್ಲಾ ವ್ಯವಹಾರಗಳನ್ನು ಮುಚ್ಚಲು ಅಥವಾ ಮನೆಯಿಂದಲೇ ಕೆಲಸ ಮಾಡಲು ಆದೇಶಿಸಲಾಗಿದೆ.

ಚೀನಾದ ಇತ್ತೀಚಿನ ಸೋಂಕಿನ ಉಲ್ಬಣವು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ ಇಂದು 32,000 ಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ. ಟೆಲಿಕಾಂ ಉಪಕರಣ ತಯಾರಕ ಹುವಾವೇ ಟೆಕ್ನಾಲಜೀಸ್ ಲಿಮಿಟೆಡ್, ಎಲೆಕ್ಟ್ರಿಕ್ ಕಾರ್ ಬ್ರ್ಯಾಂಡ್ ಬಿವೈಡಿ ಆಟೋ, ಪಿಂಗ್ ಆನ್ ಇನ್ಶುರೆನ್ಸ್ ಕಂ. ಸೇರಿದಂತೆ ಚೀನಾದ ಕೆಲವು ಪ್ರಮುಖ ಕಂಪನಿಗಳಿಗೆ ಈ ಶೆನ್‌ಜೆನ್‌ ನೆಲೆಯಾಗಿದೆ.

ಇದನ್ನು ಓದಿ:ಡಿಸಿಸಿ ಬ್ಯಾಂಕ್ ಕಳ್ಳತನ ಕೇಸ್​.. ಬ್ಯಾಂಕ್​ನ ಸಿಬ್ಬಂದಿ ಸೇರಿ ಮೂವರು ಅರೆಸ್ಟ್​, 6 ಕೋಟಿ ಮೌಲ್ಯದ ಸ್ವತ್ತು ವಶ

ಸರ್ಕಾರವು 1,938 ಹೊಸ ಪ್ರಕರಣಗಳನ್ನು ವರದಿ ಮಾಡಿದ್ದು, ಇದು ಶನಿವಾರದ ಒಟ್ಟು ಮೂರು ಪಟ್ಟು ಹೆಚ್ಚು ಹೆಚ್ಚಿನ ಅಂಕಿ ಅಂಶವಾಗಿದೆ.

ಅನಿವಾರ್ಯತೆ ಹೊರತುಪಡಿಸಿ ಹೊರ ಹೋಗದಂತೆ ನಗರಾಡಳಿತ ಸಾರ್ವಜನಿಕರಿಗೆ ಕರೆ ನೀಡಿದೆ. ಹಾಗೆ ಇಂದಿನಿಂದ ಇಂಟರ್‌ಸಿಟಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ABOUT THE AUTHOR

...view details