ಚೀನಾ: ಬಸ್ಕಿ ಹೊಡೆಯುವುದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಸ್ನಾಯುಗಳ ಬಲವನ್ನು ವೃದ್ಧಿಸಲು ಸಹಾಯಕಾರಿಯಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದನ್ನೇ ಚಾಲೆಂಜ್ ಆಗಿ ತೆಗೆದುಕೊಂಡ ಯುವತಿಯರಿಗೆ ಏನಾಗಿದೇ ಎಂದು ತಿಳಿದ್ರೆ ಎಲ್ಲರು ಒಂದು ಕ್ಷಣ ಹೌಹಾರುತ್ತಾರೆ.
ಚಾಲೆಂಜ್ ಮೇಲೆ ಸಾವಿರ ಬಸ್ಕಿ ಹೊಡೆದ್ರು, ಕೊನೆಗೆ ಕೋಮಾ ಸೇರಿದ್ರು!?.. ಅತಿಯಾದ್ರೆ ಅಮೃತವೂ ವಿಷ - ಬಸ್ಕಿ
ಅತಿಯಾದ್ರೆ ಅಮೃತವು ವಿಷವಾಗುತ್ತೆ ಎಂಬುದಕ್ಕೆ ಈ ಯುವತಿಯರೇ ಉದಾಹರಣೆ.. ಏನೋ ಚಾಲೆಂಜ್ ಮಾಡಲು ಹೋಗಿ ಈಗ ತಮ್ ಜೀವಕ್ಕೆ ತಂದಿಟ್ಟುಕೊಂಡಿದ್ದಾರೆ.
ಹೌದು, ಚೀನಾದದಲ್ಲಿ ಇತ್ತಿಚೀಗೆ ಒಂದು ಘಟನೆ ಬೆಳಕಿಗೆ ಬಂದಿದ್ದು, ಬಿಸಿ ರಕ್ತದ ಯುವತಿಯರಿಬ್ಬರೂ ವಿಡಿಯೋ ಕಾಲ್ ಮೂಲಕ ಸಾವಿರ ಬಸ್ಕಿ ಹೊಡೆಯುವ ಚಾಲೆಂಜ್ ಸ್ವೀಕರಿಸಿದ್ದರು. ನಂತರ ಬಸ್ಕಿ ಹೊಡೆಯಲು ಆರಂಭಿಸಿದ ಇಬ್ಬರು ಚಾಲೆಂಜ್ನಲ್ಲಿ ಗೆದ್ದಿದ್ದಾರೆ. ಈದಾದ ಕೆಲವೇ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಈಗ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವುಂತಾಗಿದೆ.
ಇನ್ನೂ ಯುವತಿಯರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿರುವ ಹಾಗೇ ಇಬ್ಬರೂ ಗಂಭೀರ ಸ್ನಾಯು ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ಸ್ನಾಯುಗಳು ಒಡೆದು ಹೋಗಿದ್ದು ಮಯೋಗ್ಲೋಬಿನ್ ಎಂಬ ಪ್ರೋಟೀನ್ ಹೆಚ್ಚಾಗಿ ಉತ್ಪತ್ತಿಯಾಗಿದೆ. ಇದರಿಂದ ಮೂತ್ರ ಕಂದು ಬಣ್ಣಕ್ಕೆ ತಿರುಗಿದ್ದು, ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅತಿಯಾದ್ರೆ ಅಮೃತವು ವಿಷ ಆಗುತ್ತದೆ ಎಂಬುದಕ್ಕೆ ಈ ಯುವತಿಯರೇ ಈಗ ಉದಾಹರಣೆಯಾಗಿದ್ದಾರೆ.