ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಸೋಂಕಿತರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ನೀಡುತ್ತಿರುವ ವಿಷಯ ಬೇರೆ ದೇಶಗಳಿಗೆ ಗೊತ್ತಾಗುತ್ತಿದ್ದಂತೆ ಅದರ ಮೇಲೆ ನಿಷೇಧ ಹೇರಲಾಗಿತ್ತು. ಆದ್ರೆ ಅಮೆರಿಕ, ಬ್ರೆಜಿಲ್ ಸೇರಿದಂತೆ ವಿವಿಧ ದೇಶಗಳು ಔಷಧ ರಫ್ತು ಮಾಡುವಂತೆ ನಮೋ ಬಳಿ ಮನವಿ ಮಾಡಿಕೊಂಡಿದ್ದವು.
ಅದರ ಮೇಲಿನ ನಿಷೇಧ ತೆರವುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕ, ಬ್ರೆಜಿಲ್ ಸೇರಿದಂತೆ ವಿವಿಧ ನೆರೆಹೊರೆಯ ದೇಶಗಳಿಗೆ ಈ ಔಷಧ ರಫ್ತು ಮಾಡಲು ಮುಂದಾಗಿದ್ದು, ಇವರ ನಿರ್ಧಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ನಿರ್ಧಾರಕ್ಕೆ ಫಿದಾ ಆಗಿದ್ದ ಟ್ರಂಪ್, ಅವರೊಬ್ಬ ಗ್ರೇಟ್ ವ್ಯಕ್ತಿ ಎಂದಿದ್ದರು. ಇದೀಗ ಬ್ರೇಜಿಲ್ ಅಧ್ಯಕ್ಷ ಜೈರ್ ಬೊಲ್ಸೋನರೊ ಕೂಡ ಪ್ರಧಾನಿ ಮೋದಿ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದು, ನೀವೂ ಲಾರ್ಡ್ ಹನುಮಾನ್ಗೆ ಸಮ ಎಂದಿದ್ದಾರೆ.