ಕರ್ನಾಟಕ

karnataka

ETV Bharat / international

ಪ್ರಧಾನಿ ಮೋದಿ ಬಹ್ರೇನ್​​​​ ಭೇಟಿಯಿಂದ 250 ಭಾರತೀಯ ಕೈದಿಗಳಿಗೆ ಸಿಕ್ತು ಬಿಡುಗಡೆ ಭಾಗ್ಯ - ಬಹ್ರೇನ್​​

ಆಗಸ್ಟ್ 25ರಂದು ಬಹ್ರೇನ್ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರ ಚೊಚ್ಚಲ ಭೇಟಿಯ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 250 ಭಾರತೀಯರಿಗೆ ಕ್ಷಮೆ ನೀಡಿದೆ. ರಾಯಲ್​ ಕ್ಷಮೆಗಾಗಿ 250 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಿದ ಬಹ್ರೇನ್​ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Aug 25, 2019, 7:14 PM IST

ಅಬುಧಾಭಿ:ಭಾರತದ ಪ್ರಧಾನಿಯೊಬ್ಬರು ಮೊದಲ ಬಾರಿಗೆ ಬಹ್ರೇನ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸರ್ಕಾರ ವಿವಿಧ ಕಾರಣಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ 250 ಕೈದಿಗಳಿಗೆ ಬಿಡುಗಡೆ ಭಾಗ್ಯ ಕರುಣಿಸಿದೆ.

ಆಗಸ್ಟ್ 25ರಂದು ಬಹ್ರೇನ್ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರ ಚೊಚ್ಚಲ ಭೇಟಿಯ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 250 ಭಾರತೀಯರಿಗೆ ಕ್ಷಮೆ ನೀಡಿದೆ. ರಾಯಲ್​ ಕ್ಷಮೆಗಾಗಿ 250 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಿದ ಬಹ್ರೇನ್​ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ ವಿವಿಧ ರಾಷ್ಟ್ರಗಳಲ್ಲಿ ಸುಮಾರು 8,189 ಭಾರತೀಯರು ಜೈಲು ಹಕ್ಕಿಗಳಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಸೌದಿ ಅರೇಬಿಯಾದಲ್ಲಿ ಅತ್ಯಧಿಕ 1,811 ಜನ ಇದ್ದಾರೆ.

ABOUT THE AUTHOR

...view details