ಮನಮಾ : ಚೀನಾ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಗ್ರೂಪ್- ಸಿನೊಫಾರ್ಮ್ ಅಭಿವೃದ್ಧಿಪಡಿಸಿದ ಕೋವಿಡ್-19 ಲಸಿಕೆ ನೋಂದಣಿಗೆ ಅಧಿಕೃತ ಅನುಮೋದನೆ ನೀಡಿದೆ ಎಂದು ಬಹ್ರೇನ್‌ನ ಆರೋಗ್ಯ ನಿಯಂತ್ರಕ ಪ್ರಕಟಿಸಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಸಿನೊಫಾರ್ಮ್‌ನ ಕೋವಿಡ್ ಲಸಿಕೆ ಬಳಕೆಗೆ ಬಹ್ರೇನ್ ಅನುಮೋದನೆ - ಮನಮಾ ಸುದ್ದಿ
42,299 ಸ್ವಯಂಸೇವಕರ ಮೇಲೆ ನಡೆಸಿದ ಪರೀಕ್ಷೆಯ ನಂತರ ಈ ಫಲಿತಾಂಶ ಬಂದಿದೆಎಂದು ವರದಿ ಮಾಹಿತಿ ನೀಡಿದೆ. ಇದುವರೆಗೆ ಬಹ್ರೇನ್ನಲ್ಲಿ 89,268 ಕೊರೊನಾ ಪಾಸಿಟಿವ್ ಪ್ರಕರಣ ಮತ್ತು 348 ಸಾವು ಸಂಭವಿಸಿವೆ..
ಸಿನೊಫಾರ್ಮ್
"ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳು ಶೇ.86ರಷ್ಟು ಪರಿಣಾಮಕಾರಿ ಎಂದು ತೋರಿಸಿದೆ. ಅಷ್ಟೇ ಅಲ್ಲ, ಕೊರೊನಾದ ತೀವ್ರ ಪ್ರಭಾವವನ್ನು ತಡೆಗಟ್ಟುವಲ್ಲಿ ಶೇ.100ರಷ್ಟು ಕೆಲಸ ಮಾಡುತ್ತದೆ.
42,299 ಸ್ವಯಂಸೇವಕರ ಮೇಲೆ ನಡೆಸಿದ ಪರೀಕ್ಷೆಯ ನಂತರ ಈ ಫಲಿತಾಂಶ ಬಂದಿದೆ" ಎಂದು ವರದಿ ಮಾಹಿತಿ ನೀಡಿದೆ. ಇದುವರೆಗೆ ಬಹ್ರೇನ್ನಲ್ಲಿ 89,268 ಕೊರೊನಾ ಪಾಸಿಟಿವ್ ಪ್ರಕರಣ ಮತ್ತು 348 ಸಾವು ಸಂಭವಿಸಿವೆ.