ಕಾಬುಲ್:ಭಾರತ ಹಾಗೂ ಪಾಕಿಸ್ತಾನ ನಡುವೆ ತಿಂಗಳ ಹಿಂದೆ ಉಂಟಾಗಿದ್ದ ಯುದ್ಧದ ಪರಿಸ್ಥಿತಿಯಿಂದ ಅಫ್ಘಾನಿಸ್ತಾನಕ್ಕೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ.
ಪಾಕಿಸ್ತಾನ ವಾಯುಮಾರ್ಗವನ್ನು ಬಂದ್ ಮಾಡಿದ ಪರಿಣಾಮ ಸುಮಾರು ಎಂಟು ಮಿಲಿಯನ್ ಅಮೆರಿಕನ್ ಡಾಲರ್ ನಷ್ಟವಾಗಿದೆ ಎಂದು ಅಫ್ಘಾನಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಪುಲ್ವಾಮಾ ಉಗ್ರದಾಳಿ, ಭಾರತದ ವಾಯುದಾಳಿಯ ಬಳಿಕ ಉಭಯ ದೇಶಗಳಲ್ಲಿ ಯುದ್ಧದ ಕಾರ್ಮೋಡ ಆವರಿಸಿತ್ತು. ಈ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ವಾಯುಮಾರ್ಗವನ್ನು ಸ್ಥಗಿತಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ಬದಲಿ ಮಾರ್ಗವನ್ನು ಅನುಸರಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಇರಾನ್ ಮೂಲಕ ನವದೆಹಲಿಯನ್ನು ತಲುಪಬೇಕಾಗಿತ್ತು. ಇದು ಸಹಜವಾಗಿಯೇ ಸಮಯ ಹಾಗೂ ಉಳಿದ ಖರ್ಚನ್ನು ದುಪ್ಪಟ್ಟು ಮಾಡಿದ್ದವು.
ಈ ಮೊದಲು ಪ್ರತಿದಿನ 250 ವಿಮಾನಗಳು ಪಾಕಿಸ್ತಾನ ವಾಯುಮಾರ್ಗ ಮೂಲಕವಾಗಿ ಭಾರತಕ್ಕೆ ಬರುತ್ತಿದ್ದವು. ಸದ್ಯ ಈ ಸಂಖ್ಯೆ ಒಂಭತ್ತಕ್ಕೆ ಇಳಿಕೆಯಾಗಿದೆ. ನಷ್ಟದ ಪರಿಣಾಮ ವಿಮಾನಗಳ ಸಂಖ್ಯೆ ಕಡಿತಗೊಳಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ಇವೆಲ್ಲದರ ಜೊತೆಗೆ ಪಾಕಿಸ್ತಾನ ಜೊತೆಗೆ ಮಾತುಕತೆ ನಡೆಸಲು ವಿಮಾನಯಾನ ಪ್ರಾಧಿಕಾರ ಸರ್ಕಾರಕ್ಕೆ ಒತ್ತಾಯ ಮಾಡಿದೆ.