ಕರ್ನಾಟಕ

karnataka

ETV Bharat / international

ಮೂವರು ಮಹಿಳೆಯರು ಮೂರು ನಂಬಿಕೆ ಒಂದೇ ಯೂನಿಫಾರ್ಮ್‌ ; ಇಸ್ರೇಲ್‌ ರಕ್ಷಣಾ ಪಡೆ ಟ್ವೀಟ್‌ಗೆ ಭಾರಿ ಮೆಚ್ಚುಗೆ

ಮುಸ್ಲಿಂ, ಯಹೂದಿ ಹಾಗೂ ಕ್ರಿಶ್ಚಿಯನ್‌ನ ಮೂವರು ಸೇನಾ ಮಹಿಳೆಯರು ಆ ಫೋಟೋದಲ್ಲಿದ್ದಾರೆ. ಇದು ಇಸ್ರೇಲ್‌ನ ನಿಜವಾದ ಕತೆ ಎಂದು ಇಸ್ರೇಲ್‌ನ ರಕ್ಷಣಾ ಇಲಾಖೆ ಬರೆದುಕೊಂಡು ಫೋಟೋವನ್ನು ಹಂಚಿಕೊಂಡಿದೆ..

A Muslim a Jew and a Christian all serving together in the IDF
ಮೂವರು ಮಹಿಳೆಯರು ಮೂರು ನಂಬಿಕೆ ಒಂದೇ ಯೂನಿಫಾರ್ಮ್‌; ಇಸ್ರೇಲ್‌ ರಕ್ಷಣಾ ಇಲಾಖೆ ಟ್ವೀಟ್‌ಗೆ ಭಾರಿ ಮೆಚ್ಚುಗೆ

By

Published : Dec 28, 2021, 2:29 PM IST

ಜರುಸಲೇಂ(ಇಸ್ರೇಲ್‌) :ಡಿಸೆಂಬರ್‌ 25ರಂದು ಜಗತ್ತಿನಾದ್ಯಂತ ಕ್ರಿಸ್ತನ ಜನ್ಮದಿನವನ್ನು ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಗಿತ್ತು. ಯೇಸು ಕ್ರಿಸ್ತನ ಜನ್ಮ ಸ್ಥಳವಾದ ಇಸ್ರೇಲ್‌ ರಾಜಧಾನಿ ಜರುಸಲೇಂನಲ್ಲಿ ಹಬ್ಬವೋ ಹಬ್ಬ.

ಎಲ್ಲೆಡೆ ಜನರು ಚರ್ಚಗಳಿಗೆ ಹೋಗಿ ವಿಶೇಷ ಪಾರ್ಥನೆ ಸಲ್ಲಿಸಿದರು. ಆದರೆ, ಇದೇ ಸಂದರ್ಭದಲ್ಲಿ ಇಸ್ರೇಲ್‌ನಲ್ಲಿ ಮೂವರು ಮಹಿಳೆಯರು ಮೂರು ನಂಬಿಕೆ ಒಂದೇ ಸಮವಸ್ತ್ರ ಎಂಬ ಅಡಿ ಬರಹದ ಫೋಟೋವೊಂದು ಸಖತ್‌ ವೈರಲ್‌ ಆಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಇಸ್ರೇಲ್‌ ರಕ್ಷಣಾ ಪಡೆ ತನ್ನ ಟ್ವಿಟರ್‌ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಮೂವರು ಮಹಿಳೆಯರು ಸೇನಾ ಸಮವಸ್ತ್ರವನ್ನು ಧರಿಸಿದ್ದಾರೆ. ಆದರೆ, ಇದರಲ್ಲಿನ ವಿಶೇಷ ಏನೆಂದರೆ ಆ ಮೂವರು ಮಹಿಳೆಯರು ಬೇರೆ ಬೇರೆ ಸಮುದಾಯಕ್ಕೆ ಸೇರಿದವರು.

ಮುಸ್ಲಿಂ, ಯಹೂದಿ ಹಾಗೂ ಕ್ರಿಶ್ಚಿಯನ್‌ನ ಮೂವರು ಸೇನಾ ಮಹಿಳೆಯರು ಆ ಫೋಟೋದಲ್ಲಿದ್ದಾರೆ. ಇದು ಇಸ್ರೇಲ್‌ನ ನಿಜವಾದ ಕತೆ ಎಂದು ಇಸ್ರೇಲ್‌ನ ರಕ್ಷಣಾ ಇಲಾಖೆ ಬರೆದುಕೊಂಡು ಫೋಟೋವನ್ನು ಹಂಚಿಕೊಂಡಿದೆ.

ಇಸ್ರೇಲ್‌ನಲ್ಲಿ ಕ್ರೈಸ್ತರಿಗೆ ಮುಸ್ಲಿಂ ಹಾಗೂ ಯಹೂದಿಗಳನ್ನು ಕಂಡರೆ ಆಗುವುದಿಲ್ಲ. ಆಗಾಗ ದಾಳಿಗಳು ಸೇರಿದಂತೆ ಹಲವು ಆರೋಪಗಳನ್ನು ಮಾಡಲಾಗುತ್ತಿತ್ತು. ಇದರ ನಡುವೆಯೇ ಇಸ್ರೇಲ್‌ ರಕ್ಷಣಾ ಪಡೆ ಈ ಫೋಟೋವನ್ನು ಹಂಚಿಕೊಂಡು ಸೌಹಾರ್ದತೆಯ ಜಪ ಮಾಡಿದೆ.

ಇದನ್ನೂ ಓದಿ:ಬ್ರಿಟನ್‌ ರಾಣಿ ಎಲಿಜಬೆತ್‌ ಹತ್ಯೆಗೆ ಯತ್ನ; ಭಾರತ ಮೂಲದ ವ್ಯಕ್ತಿಯ ಬಂಧನ

For All Latest Updates

ABOUT THE AUTHOR

...view details