ಬಾಗ್ದಾದ್ (ಇರಾಕ್):ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕ ಸಂಘಟನೆ ಇರಾಕ್ನ ರಾಜಧಾನಿ ಬಾಗ್ದಾನ್ನಲ್ಲಿ ದಾಳಿ ನಡೆಸಿ ನಾಲ್ವರನ್ನು ಕೊಂದಿದೆ ಎಂದು ಇರಾಕ್ನ ಮಿಲಿಟರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರ ರಾತ್ರಿ ದಾಳಿ ನಾಲ್ವರು ಇಸ್ಲಾಮಿಕ್ ಸ್ಟೇಟ್ಸ್ನ ಭಯೋತ್ಪಾದಕರು ದಾಳಿ ನಡೆಸಿದ್ದು, ಅಲ್ - ರಾಡ್ವಾನಿಯಾ ಪ್ರದೇಶದಲ್ಲಿ ಸಹ್ವಾ ಎಂದು ಕರೆಯಲ್ಪಡುವ ಸರ್ಕಾರಿ ಬೆಂಬಲಿತ ಅರೆಸೈನಿಕ ಪಡೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಹೇಳಿದೆ.