ಕರ್ನಾಟಕ

karnataka

ETV Bharat / international

ಯೆಮೆನ್​ನಲ್ಲಿ ಹೌತಿ ಬಂಡುಕೋರರ ಅಟ್ಟಹಾಸ: 3 ಸಾವು, 16 ಮಂದಿಗೆ ಗಾಯ

ಹೌತಿ ಬಂಡುಕೋರರು ಯೆಮೆನ್​ನ ಮಾರಿಬ್‌ನಲ್ಲಿನ ಸರ್ಕಾರಿ ನಿಯಂತ್ರಿತ ಪ್ರದೇಶಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಬಳಸಿ ಸಂಘಟಿತ ದಾಳಿ ನಡೆಸಿದ್ದಾರೆ.

By

Published : Jun 11, 2021, 3:02 AM IST

3-killed-in-houthi-airstrikes-in-yemens-marib
ಯೆಮೆನ್​ನಲ್ಲಿ ಹೌತಿ ಬಂಡುಕೋರರ ಅಟ್ಟಹಾಸ: 3 ಸಾವು, 16 ಮಂದಿಗೆ ಗಾಯ

ಅಡೆನ್ (ಯೆಮೆನ್):ಯೆಮೆನ್​ನಲ್ಲಿ ಹೌತಿ ಬಂಡುಕೋರರ ಅಟ್ಟಹಾಸ ಮುಂದುವರೆದಿದ್ದು, ಮಾರಿಬ್​ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಮೂವರು ಸ್ಥಳೀಯರು ಸಾವನ್ನಪ್ಪಿ, ಸುಮಾರು 16 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೌತಿ ಬಂಡುಕೋರರು ಮಾರಿಬ್‌ನಲ್ಲಿನ ಸರ್ಕಾರಿ ನಿಯಂತ್ರಿತ ಪ್ರದೇಶಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಬಳಸಿ ಸಂಘಟಿತ ದಾಳಿ ನಡೆಸಿದ್ದಾರೆ. ದಾಳಿಗೆ ತುತ್ತಾದ ಪ್ರದೇಶಲ್ಲಿ ಜನರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯ ಭೀಕರತೆಗೆ ಉಂಟಾದ ಶಬ್ದದಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. ಕಳೆದ ಶನಿವಾರ, ಹೌತಿ ಬಂಡುಕೋರರ ನಡೆಸಿದ್ದ ದಾಳಿಯಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದರು.

ಮಾರಿಬ್ ಪಟ್ಟಣವನ್ನು ವಶಕ್ಕೆ ಪಡೆಯಲು ಕಳೆದ ಫೆಬ್ರವರಿಯಿಂದ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಯತ್ನಿಸುತ್ತಿದ್ದಾರೆ. ಯೆಮನ್‌ನ ಉತ್ತರ ಭಾಗದಲ್ಲಿ ತನ್ನ ನಿಯಂತ್ರಣ ಸ್ಥಾಪಿಸಲು ಹೌತಿ ಯತ್ನಿಸುತ್ತಿದೆ.

ಇದನ್ನೂ ಓದಿ:ಯೆಮೆನ್​ನಲ್ಲಿ ಹೌತಿ ಬಂಡುಕೋರರ ಕ್ಷಿಪಣಿ ದಾಳಿಗೆ 17 ಮಂದಿ ಬಲಿ

ABOUT THE AUTHOR

...view details