ಕರ್ನಾಟಕ

karnataka

ETV Bharat / international

ಇರಾಕ್‌ನಲ್ಲಿ ಶಂಕಿತ ಐಎಸ್ ಉಗ್ರರ ದಾಳಿ: 13 ಪೊಲೀಸರು ಸಾವು, ಐವರಿಗೆ ಗಾಯ - suspected IS attack in northern Iraq news

ಉತ್ತರ ಇರಾಕ್‌ನ ಫೆಡರಲ್ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, 13 ಪೊಲೀಸರು ಸಾವನ್ನಪ್ಪಿದ್ದಾರೆ.

13 police killed in suspected IS attack in northern Iraq
ಉತ್ತರ ಇರಾಕ್‌ನಲ್ಲಿ ಶಂಕಿತ ಐಎಸ್ ಉಗ್ರರ ದಾಳಿ

By

Published : Sep 5, 2021, 5:41 PM IST

ಬಾಗ್ದಾದ್ (ಇರಾಕ್):ಉತ್ತರ ಇರಾಕ್‌ನ ಫೆಡರಲ್ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 13 ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (IS) ಉಗ್ರರ ಮೇಲೆ ಹೊರಿಸಲಾಗಿದೆ.

ಕಿರ್ಕುಕ್ ಪ್ರಾಂತ್ಯದ ಸತಿಹಾ ಹಳ್ಳಿಯ ಚೆಕ್‌ಪೋಸ್ಟ್‌ನಲ್ಲಿ ಶನಿವಾರ ತಡರಾತ್ರಿ ನಡೆದ ದಾಳಿಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ. ಉಗ್ರರೊಂದಿಗೆ ಸುಮಾರು ಒಂದು ಗಂಟೆ ಗುಂಡಿನ ಚಕಮಕಿ ನಡೆಯಿತು ಎಂದು ಭದ್ರತಾ ಅಧಿಕಾರಿ ತಿಳಿಸಿದ್ದಾರೆ.

ದಾಳಿಯ ಹೊಣೆಯನ್ನು ಐಎಸ್‌ ಉಗ್ರಗಾಮಿ ಗುಂಪು ತಕ್ಷಣವೇ ಹೊತ್ತುಕೊಂಡಿಲ್ಲ. ಆದರೆ 2017ರಲ್ಲಿ ಇರಾಕಿನ ಭದ್ರತಾ ಪಡೆಗಳು ಯುಎಸ್ ನೇತೃತ್ವದ ಒಕ್ಕೂಟದ ನೆರವಿನಿಂದ ಐಎಸ್​ ಉಗ್ರರನ್ನು ಮಣಿಸಿತ್ತು. ಪ್ರಾದೇಶಿಕ ಸೋಲಿನ ನಂತರ ಉತ್ತರ ಇರಾಕ್ ಐಎಸ್ ಚಟುವಟಿಕೆಯ ಹಾಟ್ ಸ್ಪಾಟ್ ಆಗಿತ್ತು.

ಇರಾಕಿ ಪಡೆಗಳು ನಿಯಮಿತವಾಗಿ ಐಎಸ್ ವಿರೋಧಿ ಕಾರ್ಯಾಚರಣೆಗಳನ್ನು ಪರ್ವತ ಪ್ರದೇಶ ಮತ್ತು ಪಶ್ಚಿಮ ಇರಾಕ್‌ನ ಮರುಭೂಮಿಗಳಲ್ಲಿ ನಡೆಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಐಎಸ್ ದಾಳಿ ಕಡಿಮೆಯಾಗಿದೆ.

ಇದನ್ನೂ ಓದಿ:ಪಾಕಿಸ್ತಾನದಲ್ಲಿ ತಾಲಿಬಾನ್ ಆತ್ಮಾಹುತಿ ದಾಳಿ: ಮೂವರ ಸಾವು, 20 ಮಂದಿಗೆ ಗಾಯ

ABOUT THE AUTHOR

...view details