ಕೀವ್(ಉಕ್ರೇನ್): ರಷ್ಯಾ ಸೇನೆ ಉಕ್ರೇನ್ ಮೇಲೆ ಆಕ್ರಮಣವನ್ನು ಮುಂದುವರೆಸಿದ್ದು, ಆರ್ಮೆನಿಯಾದಲ್ಲಿರುವ ತನ್ನ ಸೇನೆಯನ್ನು ಉಕ್ರೇನ್ಗೆ ತರಿಸಿಕೊಳ್ಳಲು ಮುಂದಾಗಿದೆ. ಈ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮೀರ್ ಝೆಲೆನ್ಸ್ಕಿ ಉಕ್ರೇನ್ನಲ್ಲಿ ಪ್ರಾದೇಶಿಕ ಸಮಗ್ರತೆ ಪುನಃಸ್ಥಾಪನೆ ಮಾಡಿ, ನ್ಯಾಯವನ್ನು ಒದಗಿಸುವ ಸಮಯ ಬಂದಿದೆ ಎಂದು ಹೇಳಿಕೆ ನೀಡಿದ್ದಾರೆ.
ಎಲ್ಲರೂ ನನ್ನ ಮಾತನ್ನು ಕೇಳಿಸಿಕೊಳ್ಳಬೇಕೆಂದು ಬಯಸುತ್ತೇನೆ. ಅದರಲ್ಲೂ ವಿಶೇಷವಾಗಿ ರಷ್ಯಾ ನನ್ನ ಮಾತನ್ನು ಕೇಳಿಸಿಕೊಳ್ಳಬೇಕು. ಸಭೆ ನಡೆಸುವ ಮತ್ತು ಮಾತುಕತೆ ನಡೆಸುವ ಸಮಯ ಬಂದಿದೆ ಎಂದು ವೊಲೊಡಿಮೀರ್ ಝೆಲೆನ್ಸ್ಕಿ ಹೇಳಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಯುದ್ಧದಿಂದ ಹಾನಿಗೊಳಗಾದ ನಗರಗಳಿಗೆ ಬರುತ್ತಿರುವ ಮಾನವೀಯ ನೆರವನ್ನು ರಷ್ಯಾ ನಿರ್ಬಂಧಿಸಿದೆ ಎಂದು ಝೆಲೆನ್ಸ್ಕಿ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಉದ್ದೇಶಪೂರ್ವಕವಾಗಿ ಮಾನವೀಯ ನೆರವನ್ನು ತಡೆಯಲಾಗುತ್ತಿದೆ. ರಷ್ಯಾ ಇದಕ್ಕೆ ಉತ್ತರಿಸಬೇಕಾಗುತ್ತದೆ ಎಂದು ಝೆಲೆನ್ಸ್ಕಿ ಆಗ್ರಹಿಸಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.