ಕೀವ್(ಉಕ್ರೇನ್):ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಕಳೆದ 8 ದಿನಗಳಿಂದಲೂ ಮುಂದುವರೆದಿದೆ. ಈಗಾಗಲೇ ಕೀವ್, ಖಾರ್ಕಿವ್ ಸೇರಿದಂತೆ ಬಹುತೇಕ ಎಲ್ಲ ನಗರಗಳು ಧ್ವಂಸಗೊಂಡಿವೆ. ಈ ವಿಚಾರವಾಗಿ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಧ್ವಂಸಗೊಂಡಿರುವ ನಮ್ಮ ದೇಶವನ್ನು ಮರಳಿ ಕಟ್ಟುತ್ತೇವೆ ಎಂದಿದ್ದಾರೆ.
ಪ್ರತಿವೊಂದು ಮನೆ, ಬೀದಿ, ನಗರ ಪುನಃ ಸ್ಥಾಪಿಸುತ್ತೇವೆ ಎಂದಿರುವ ವೊಲೊಡಿಮಿರ್, ಇದಕ್ಕೆ ರಷ್ಯಾ ಸಂಪೂರ್ಣ ಬೆಲೆ ತೆರಲಿದೆ ಎಂದಿದ್ದಾರೆ. ಉಕ್ರೇನಿಯರ ವಿರುದ್ಧ ಸಮರ ಸಾರಿರುವ ನೀವೂ ಪ್ರತಿವೊಂದಕ್ಕೂ ಮರುಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿರುವ ವಿಡಿಯೋ ಬಿಡುಗಡೆಯಾಗಿದೆ. ಜೊತೆಗೆ ರಷ್ಯಾ ಸೈನಿಕರ ಮೃತ ದೇಹದಿಂದ ಉಕ್ರೇನ್ ಆವೃತವಾಗುವುದನ್ನು ಬಯಸುವುದಿಲ್ಲ. ಎಲ್ಲರೂ ನಿಮ್ಮ ದೇಶಕ್ಕೆ ಮರಳಿ ಎಂದು ಝೆಲೆನ್ಸ್ಕಿ ಎಚ್ಚರಿಕೆ ನೀಡಿದ್ದಾರೆ.