ಕರ್ನಾಟಕ

karnataka

By

Published : Feb 26, 2022, 1:49 PM IST

Updated : Feb 26, 2022, 2:14 PM IST

ETV Bharat / international

ಉಕ್ರೇನ್‌ಗೆ ಫ್ರಾನ್ಸ್​ ಶಸ್ತ್ರಾಸ್ತ್ರ ಬಲ.. ಯುದ್ಧ ನಿಲ್ಲಿಸದಿರಲು ಅಧ್ಯಕ್ಷ ಝೆಲೆನ್ಸ್ಕಿ ಪಣ..

ಉಕ್ರೇನ್‌ ಬೆಂಬಲಕ್ಕೆ ಬಂದಿರುವ ಫ್ರಾನ್ಸ್​ ತನ್ನ ದೇಶದಿಂದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. ಯುದ್ಧವು ನಡೆಯುತ್ತದೆ - ನಾವು ಅದಕ್ಕೆ ಸಿದ್ಧರಾಗಿರಬೇಕು ಎಂದು ಉಕ್ರೇನ್‌ ಅಧ್ಯಕ್ಷ ಹೇಳಿದ್ದಾರೆ..

ಉಕ್ರೇನ್‌ ಅಧ್ಯಕ್ಷ
ಉಕ್ರೇನ್‌ ಅಧ್ಯಕ್ಷ

ಕೀವ್(ಉಕ್ರೇನ್):ನಿನ್ನೆಯಷ್ಟೇ ವಿಡಿಯೋವೊಂದರಲ್ಲಿ ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ಅನ್ನು ಪ್ರವೇಶಿಸಿದ್ದು, ಏನೇ ಆದರೂ ತಾವು ಕೀವ್​ನಲ್ಲೇ ಉಳಿಯುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರತಿಜ್ಞೆ ಮಾಡಿದ್ದರು. ಇದೀಗ ಮತ್ತೊಂದು ವಿಡಿಯೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

"ಆಯುಧಗಳನ್ನು ತ್ಯಜಿಸಲು ನಾನು ನಮ್ಮ ಸೇನೆಗೆ ಹೇಳಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿದೆ. ಜನರನ್ನು ಸ್ಥಳಾಂತರಿಸುವ ಕುರಿತು ಆನ್‌ಲೈನ್‌ನಲ್ಲಿ ಸಾಕಷ್ಟು ನಕಲಿ ಮಾಹಿತಿಗಳಿವೆ. ನಾನು ಇಲ್ಲಿಯೇ ಇದ್ದೇನೆ. ನಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುವುದಿಲ್ಲ, ನಾವು ನಮ್ಮ ರಾಜ್ಯವನ್ನು ರಕ್ಷಿಸುತ್ತೇವೆ. ಯುದ್ಧವು ನಡೆಯುತ್ತದೆ- ನಾವು ಅದಕ್ಕೆ ಸಿದ್ಧರಾಗಿರಬೇಕು" ಎಂದು ಸೆಂಟ್ರಲ್​​ ಕೀವ್​ನಲ್ಲಿ ನಿಂತುಕೊಂಡು ಝೆಲೆನ್ಸ್ಕಿ ಸೆಲ್ಫಿ ವಿಡಿಯೋದಲ್ಲಿ ಹೇಳಿದ್ದಾರೆ.

ಫ್ರಾನ್ಸ್​ನಿಂದ ಶಸ್ತ್ರಾಸ್ತ್ರ..ಇತ್ತ ಉಕ್ರೇನ್‌ ಬೆಂಬಲಕ್ಕೆ ಬಂದಿರುವ ಫ್ರಾನ್ಸ್​ ತನ್ನ ದೇಶದಿಂದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. "ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಜೊತೆ ರಾಜತಾಂತ್ರಿಕ ಸಂಭಾಷಣೆ ಜೊತೆ ಹೊಸ ದಿನ ಆರಂಭವಾಗಿದೆ. ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು ಉಕ್ರೇನ್​ಗೆ ಬರುತ್ತಿವೆ. ಯುದ್ಧ ವಿರೋಧಿ ಒಕ್ಕೂಟವು ಕಾರ್ಯನಿರ್ವಹಿಸುತ್ತಿದೆ" ಎಂದು ಝೆಲೆನ್ಸ್ಕಿ ಟ್ವೀಟ್​ ಮಾಡಿ ತಿಳಿಸಿದ್ದಾರೆ. ಈಗಾಗಲೇ ಉಕ್ರೇನ್​ ರಾಜಧಾನಿ ಕೀವ್​ಗೆ ರಷ್ಯಾ ಪಡೆಗಳು ಎಂಟ್ರಿ ಕೊಟ್ಟಿದ್ದು, ಇಂದು ಕೀವ್​ ಅನ್ನು ವಶಪಡಿಸಿಕೊಳ್ಳಲು ಮುಂದಾಗಿವೆ.

ಇದನ್ನೂ ಓದಿ: ರಾಜಧಾನಿಗೆ ರಷ್ಯಾದ 'ವಿಧ್ವಂಸಕ ಗುಂಪುಗಳ' ಎಂಟ್ರಿ - ಆದ್ರೂ, ಕೀವ್​ನಲ್ಲೇ ಇರುವೆ ಎಂದ ಉಕ್ರೇನ್ ಅಧ್ಯಕ್ಷ

Last Updated : Feb 26, 2022, 2:14 PM IST

ABOUT THE AUTHOR

...view details