ಬ್ರಿಟನ್ನ ಮಹಿಳೆಯೊಬ್ಬರು ಮೂರು ವರ್ಷಗಳ ಹಿಂದೆ ಅಜ್ಜಿಯಾಗಿದ್ದರು. ಅಜ್ಜಿಯಾಗೋದರಲ್ಲಿ ಏನೂ ವಿಶೇಷತೆ ಇಲ್ಲ.. ಆದರೆ, ಇಲ್ಲಿ ನಾವು ಹೇಳಲು ಹೊರಟಿರುವ ಮಹಿಳೆ ಕೇವಲ ಮೂವತ್ತನೇ ವಯಸ್ಸಿನಲ್ಲಿ ಅಜ್ಜಿಯಾಗಿದ್ದರು. ಆ ಕಿರಿಯ ಅಜ್ಜಿಯ ಮಗಳು ಕೇವಲ 14 ವರ್ಷದವಳಿದ್ದಾಗ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಹಾಗಾಗಿ ಆಕೆಯ ತಾಯಿ ಅಜ್ಜಿ ಪಟ್ಟವನ್ನು ಪಡೆದು ಮೂರು ವರ್ಷಗಳಾಗಿದ್ದು, ಮೊಮ್ಮಗನನ್ನು ನೋಡಿದರೆ, ನನ್ನದೇ ಮಗು ಎಂದು ಜನರು ಭಾವಿಸುತ್ತಾರೆ ಎಂದು ಆ ಮಹಿಳೆ ಹೇಳಿಕೊಳ್ಳುತ್ತಾರೆ. ಈ ಕಿರಿಯ ಅಜ್ಜಿಯ ಕುಟುಂಬ ಈಗ ಬೆಳಕಿಗೆ ಬಂದಿದೆ.
ಚಿಕ್ಕ ವಯಸ್ಸಿಗೇ ಅಜ್ಜಿಯಾದ ಮಹಿಳೆಯ ಹೆಸರು ಕೆಲ್ಲಿ ಹೀಲಿ.. ಪಶ್ಚಿಮ ಲಂಡನ್‌ನ ಕ್ರಾನ್‌ಫೋರ್ಡ್‌ನಲ್ಲಿ ಕೆಲ್ಲಿ ಹೀಲಿ ವಾಸಿಸುತ್ತಿದ್ದು, ಈಕೆ ಐದು ಮಕ್ಕಳ ತಾಯಿಯೂ ಹೌದು.. ಆ ಐದು ಮಕ್ಕಳಲ್ಲಿ 14 ವರ್ಷದ ಸ್ಕೈ ಸಾಲ್ಟರ್ ಬಾಲಕಿಯೂ ಇದ್ದು, ಆ ಬಾಲಕಿ ಯುವಕನೊಂದಿಗೆ ರಿಲೇಶನ್ಶಿಪ್ನಲ್ಲಿದ್ದಳು. ಈ ಸಂಬಂಧ ಆಕೆಯನ್ನು ಗರ್ಭವತಿಯನ್ನಾಗಿ ಮಾಡಿತ್ತು. ಗರ್ಭಪಾತ ಮಾಡಲು ವೈದ್ಯರು ಒಪ್ಪಲಿಲ್ಲ. ಸ್ಕೈ ಸಾಲ್ಟರ್ ಆಗಲೇ 36 ವಾರಗಳ ಗರ್ಭಿಣಿಯಾಗಿದ್ದ ಕಾರಣ, ಗರ್ಭಪಾತ ಮಾಡಿದರೆ, ಹೆಚ್ಚಿನ ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದರು.
'ಮಗುವಿನ ಹೃದಯ ಬಡಿತ ಕೇಳಿದಾಗ':ಬಾಲಕಿಯನ್ನು ವೆಸ್ಟ್ ಮಿಡ್ಲ್ಸೆಕ್ಸ್ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಗರ್ಭಿಣಿ ಎಂದು ಗೊತ್ತಾದಾಗ ಪ್ರತಿಕ್ರಿಯೆ ನೀಡಿದ್ದ ಬಾಲಕಿ ಸ್ಕೈ ಸಾಲ್ಟರ್ 'ನಾನು ಗರ್ಭಿಣಿ ಎಂದು ತಿಳಿದು ನನಗೆ ಆಘಾತವಾಗಿತ್ತು.. ಆದರೆ.. ಹುಟ್ಟಲಿರುವ ಮಗುವಿನ ಹೃದಯ ಬಡಿತವನ್ನು ನಾನು ಕೇಳಿದಾಗ, ನನ್ನ ಹೃದಯ ಪ್ರೀತಿಯಿಂದ ತುಂಬಿತ್ತು. ನನ್ನ ಮಗುವಿಗೆ ಮೊದಲ ಸ್ಥಾನ.. ನನ್ನದು ಎರಡನೇ ಸ್ಥಾನ ಎಂದು ಆಗಲೇ ಅರಿತುಕೊಂಡೆ ಎಂದು ಭಾವುಕಳಾಗಿದ್ದಳು.
'ತಾಯಿಯಾಗಿ ನಾನು ಎಲ್ಲವನ್ನೂ ಸಹಿಸಿಕೊಳ್ಳಬೇಕಾಗಿತ್ತು' : ಮೊದಲಿಗೆ ಸಾಲ್ಟರ್‌ಗೆ ತಾನು ಗರ್ಭಿಣಿ ಎಂಬ ವಿಚಾರ ಗೊತ್ತಾದಾಗ ಧೈರ್ಯ ಮಾಡಿ ಮನೆಯಲ್ಲಿ ವಿಷಯ ತಿಳಿಸಿದಳು. ಮನೆಯಲ್ಲಿ ಯಾರೂ ಸಹಕಾರ ನೀಡಲಿಲ್ಲ. ಆದರೆ ಆಕೆಯ ತಾಯಿ ಕೆಲ್ಲಿ ಹೀಲಿ ತನ್ನ ಮಗಳನ್ನು ಅರ್ಥ ಮಾಡಿಕೊಂಡಿದ್ದರು. 'ಇಷ್ಟು ಚಿಕ್ಕ ವಯಸ್ಸಿನಲ್ಲಿ ನಾನು ಅಜ್ಜಿಯಾಗುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಆದರೆ.. ಪರಿಸ್ಥಿತಿಯನ್ನು ನಾನು ಅರ್ಥ ಮಾಡಿಕೊಳ್ಳಬೇಕಿತ್ತು. ಸಾಲ್ಟರ್ ವಿರುದ್ಧ ಕಿರುಚುವುದರಲ್ಲಿ ಅರ್ಥವಿಲ್ಲ ಎಂದು ನನಗೆ ಗೊತ್ತಾಯಿತು. ನಾನು ತೋರಿಸಬೇಕಾದ ಪ್ರೀತಿಯೆಂದರೆ, ಈಗ ಆಕೆಯ ಜೊತೆಯಲ್ಲಿ ನಿಲ್ಲುವುದಾಗಿತ್ತು. ತಾಯಿಯಾಗಿ ನಾನು ಎಲ್ಲವನ್ನೂ ಸಹಿಸಿಕೊಳ್ಳಬೇಕಾಗಿತ್ತು ಎಂದು ಕೆಲ್ಲಿ ಹೀಲಿ ಹೇಳಿದ್ದಾರೆ.
ಮೊಮ್ಮಗನೊಂದಿಗೆ ಕೆಲ್ಲಿ ಹೀಲಿ 'ಸ್ನೇಹಿತರು ಕೀಟಲೆ ಮಾಡ್ತಾರೆ':ಕೊನೆಗೆ ಆಸ್ಪತ್ರೆ ಸೇರಿದ ಸ್ಕೈ ಸಾಲ್ಟರ್ ಆಗಸ್ಟ್ 2018ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿಗೆ ಬೈಲಿ ಎಂದು ನಾಮಕರಣ ಮಾಡಿದರು. ಇದೆಲ್ಲ ನಡೆದು ಮೂರು ವರ್ಷಗಳು ಕಳೆದಿವೆ. ಅಜ್ಜಿ ಕೆಲ್ಲಿ ಹೀಲಿಗೆ ಈಗ 33 ವರ್ಷ. ಸ್ಕೈ ಸಾಲ್ಟರ್‌ಗೆ 17 ವರ್ಷ. ಅವಳ ಮಗ ಬೈಲಿಗೆ ಮೂರು ವರ್ಷ. ನಾನಿನ್ನೂ 20 ವರ್ಷದ ಯುವತಿಯಂತೆ ಇದ್ದೇನೆ. ನಾನು ಅಜ್ಜಿಯಾಗಿದ್ದೇನೆ ಎಂದು ತಿಳಿದಾಗ ಸ್ವಲ್ಪ ಮುಜುಗರವಾಗುತ್ತದೆ. ನನಗೆ ಮೊಮ್ಮಗ ಇದ್ದಾನೆ ಎಂದು ಸ್ನೇಹಿತರು ನನ್ನನ್ನು ಕೀಟಲೆ ಮಾಡುತ್ತಾರೆ ಎಂದು ಕೆಲ್ಲಿ ತನ್ನ ಅನುಭವ ಬಿಚ್ಚಿಟ್ಟಿದ್ದಾರೆ.
ಚಿಕ್ಕ ವಯಸ್ಸಿಗೆ ತಾಯಿಯಾದ ಸ್ಕೈ ಸಾಲ್ಟರ್ ಈವರೆಗಿನ ದಾಖಲೆ ಯಾವುದು ಗೊತ್ತಾ?:ಬ್ರಿಟನ್ನಲ್ಲಿ33 ವರ್ಷದ ಗೆಮ್ಮಾ ಸ್ಕಿನ್ನರ್ ಅವರ ಮಗಳು ಕಳೆದ ವರ್ಷ ಅಕ್ಟೋಬರ್‌ನಲ್ಲಿ 17ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಗ ಬ್ರಿಟನ್ನ ಅತ್ಯಂತ ಕಿರಿಯ ವಯಸ್ಸಿನ ಅಜ್ಜಿ ಎಂಬ ದಾಖಲೆ ಅವರ ಹೆಸರಲ್ಲಿ ಇತ್ತು. ಈಗ ಕೆಲ್ಲಿ ಹೀಲಿ ಅವರು ಕಿರಿಯ ಅಜ್ಜಿಯ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಗುವಿನೊಂದಿಗೆ ಸ್ಕೈ ಸಾಲ್ಟರ್ ಇದನ್ನೂ ಓದಿ:4 ದಶಕಗಳ ಹಿಂದೆ ಕಳುವಾಗಿದ್ದ ಭಾರತದ ಪ್ರಾಚೀನ ಶಿಲ್ಪ ಬೆಲ್ಜಿಯಂನಲ್ಲಿ ಪತ್ತೆ, ಶೀಘ್ರವೇ ಸ್ವದೇಶಕ್ಕೆ