ಕರ್ನಾಟಕ

karnataka

ETV Bharat / international

ನಮ್ಮದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ, ಭಾರತ-ಚೀನಾಗೆ ನೀಡಿದಷ್ಟು ಪ್ರಾಶಸ್ತ್ಯ ನಮಗಿಲ್ಲ ಎಂದ ಟ್ರಂಪ್​! - ಅಮೆರಿಕಾ ಅಧ್ಯಕ್ಷ

ಭಾರತ ಮತ್ತು ಚೀನಾವನ್ನು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳೆಂದು ಪರಿಗಣಿಸಿ ಅವರಿಗೆ ಬೇಕಾದ ಸಹಕಾರ ನೀಡಲಾಗುತ್ತಿದೆ. ಆದರೆ ನಮ್ಮನ್ನು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವೆಂದು ಪರಿಗಣಿಸುತ್ತಿಲ್ಲ, ನಮ್ಮದು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವೇ ಎಂದು ವಿಶ್ವ ವ್ಯಾಪಾರ ಸಂಸ್ಥೆ ( ಡಬ್ಲ್ಯೂಟಿಒ) ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಅಸಮಧಾನ
ಟ್ರಂಪ್ ಅಸಮಧಾನ

By

Published : Jan 23, 2020, 5:46 AM IST

Updated : Jan 23, 2020, 6:47 AM IST

ದಾವೋಸ್​( ಸ್ವಿಟ್ಜರ್​ಲ್ಯಾಂಡ್​) :ವಿಶ್ವ ವ್ಯಾಪಾರ ಸಂಸ್ಥೆ ( ಡಬ್ಲ್ಯೂಟಿಒ) ಚೀನಾ ಮತ್ತು ಭಾರತವನ್ನು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳೆಂದು ಪರಿಗಣಿಸಿ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದೆ. ಆದರೆ ನಮಗೆ ತಕ್ಕ ಮಟ್ಟಿನ ಪ್ರಾಶಸ್ತ್ಯ ನೀಡುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಆರೋಪಿಸಿದ್ದಾರೆ.

ಭಾರತ ಮತ್ತು ಚೀನಾವನ್ನು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳೆಂದು ಪರಿಗಣಿಸಿ ಅವರಿಗೆ ಬೇಕಾದ ಸಹಕಾರ ನೀಡಲಾಗುತ್ತಿದೆ. ಆದರೆ ನಮ್ಮನ್ನು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವೆಂದು ಪರಿಗಣಿಸುತ್ತಿಲ್ಲ, ನಮ್ಮದು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವೇ ಎಂದು ಅವರು ಹೇಳಿದ್ದಾರೆ. ಭಾರತ ಮತ್ತು ಚೀನಾ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳೆಂದು ಹೇಳಿಕೊಂಡು ಎಲ್ಲ ಸೌಲಭ್ಯ ಪಡೆಯುತ್ತಿವೆ. ಆದರೆ ನಾವು ಹಲವು ವರ್ಷಗಳಿಂದ ನಮ್ಮದು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವೆಂದು ಪರಿಗಣಿಸಿದರೂ ಯಾವುದೇ ಸಹಕಾರ ಸಿಗುತ್ತಿಲ್ಲ. ಆದ್ದರಿಂದ ನಾವು ವಿಶ್ವ ವ್ಯಾಪಾರ ಸಂಸ್ಥೆಯೊಂದಿಗಿನ ಒಪ್ಪಂದದ ಹೊಸ ರಚನೆಯ ಬಗ್ಗೆ ಮಾತನಾಡುತ್ತಿದ್ದೇವೆ. ಇಲ್ಲ ಅಂದ್ರೆ ನಾವೇನಾದರು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ವಿಶ್ವ ವ್ಯಾಪಾರ ಸಂಸ್ಥೆ ( ಡಬ್ಲ್ಯೂಟಿಒ)ಯ ಸಹಾಯ ಇಲ್ಲದಿದ್ದರೆ, ಚೀನಾ ಇವತ್ತು ಯಾವ ಮಟ್ಟದಲ್ಲಿ ಇದೆಯೂ ಹಾಗೆ ಇರುತ್ತಿರಲಿಲ್ಲ. ಚೀನಾ ವಿಶ್ವ ವ್ಯಾಪಾರ ಸಂಸ್ಥೆಯನ್ನು ಒಂದು ವಾಹನದ ತರ ಬಳಸುತ್ತಿದೆ. ನಾನು ಕೂಡ ಚೀನಾಕ್ಕೆ ಹೆಚ್ಚು ಮನ್ನಣೆ ನೀಡಿದ್ದೇನೆ. ನನ್ನ ಸ್ಥಾನದಲ್ಲಿ ಬೇರೆಯವರು ಇರುತ್ತಿದ್ದರೆ ಈ ರೀತಿಯ ಮನ್ನಣೆ ನೀಡುತ್ತಿರಲಿಲ್ಲ ಎಂದು ಚೀನಾ ವಿರುದ್ಧ ಟ್ರಂಪ್​ ವಾಗ್ದಾಳಿ ನಡೆಸಿದ್ದಾರೆ.

Last Updated : Jan 23, 2020, 6:47 AM IST

ABOUT THE AUTHOR

...view details