ಕೀವ್: ನ್ಯಾಟೋ ಗುಂಪಿಗೆ ಉಕ್ರೇನ್ ಸೇರ್ಪಡೆಯನ್ನೇ ಪ್ರಮುಖ ಕಾರಣವನ್ನಾಗಿಸಿಕೊಂಡು ಭಯಾನಕ ಯುದ್ಧ ಸಾರಿರುವ ರಷ್ಯಾ ವಾಯುದಾಳಿಯಲ್ಲಿ ವಿಶ್ವದ ಅತಿ ದೊಡ್ಡ ವಿಮಾನ 'ಮ್ರಿಯಾ'ವನ್ನು ನಾಶಪಡಿಸಲಾಗಿದೆ ಎಂದು ತಿಳಿದುಬಂದಿದೆ.
4ನೇ ದಿನದ ದಾಳಿಯಲ್ಲಿ(ಬಾನುವಾರ) ಉಕ್ರೇನ್ ರಾಜಧಾನಿ ಕೀವ್ ಸಮೀಪದಲ್ಲಿ ವಿಶ್ವದ ಅತಿ ದೊಡ್ಡದಾದ AN-225 ಮ್ರಿಯಾ ಸರಕು ಸಾಗಣೆ ವಿಮಾನವನ್ನು ರಷ್ಯಾ ಪಡೆಗಳು ಹೊಡೆದು ಹಾಕಿವೆ. ಆದರೆ ನಮ್ಮ ಮ್ರಿಯಾ ಎಂದಿಗೂ ನಾಶವಾಗುವುದಿಲ್ಲ ಎಂದು ಉಕ್ರೇನ್ ಸರ್ಕಾರ ಟ್ವೀಟ್ ಮಾಡಿದೆ.