ದಿ ಹೇಗ್(ನೆದರ್‌ಲ್ಯಾಂಡ್):ಜಾಗತಿಕಮಟ್ಟದಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಭಾರತೀಯ ಸಂಜಾತ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ.
ಕುಲಭೂಷಣ್ ಜಾಧವ್ಗೆ ಪಾಕಿಸ್ತಾನಿ ಮಿಲಿಟರಿ ಕೋರ್ಟ್ ನೀಡಿದ್ದ ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಈಗಾಗಲೇ ವಿಚಾರಣೆ ಸಂಪೂರ್ಣ ಮುಕ್ತಾಯವಾಗಿದ್ದು ಭಾರತೀಯ ಕಾಲಮಾನ ಬುಧವಾರ ಸಂಜೆ 6.30ಕ್ಕೆ ಕೋರ್ಟ್ ತನ್ನ ಆದೇಶ ನೀಡಲಿದೆ.
ಏನಿದು ಪ್ರಕರಣ.?
49 ವರ್ಷದ ಕುಲಭೂಷಣ್ ಜಾಧವ್ ನೌಕೌಸೇನೆಯ ಮಾಜಿ ಅಧಿಕಾರಿಯಾಗಿದ್ದು, ಪಾಕಿಸ್ತಾನ 2016ರ ಮಾರ್ಚ್ 3ರಂದು ಬಲೂಚಿಸ್ತಾನ ಪ್ರಾಂತ್ಯದಲ್ಲಿ ವಶಕ್ಕೆ ಪಡೆದಿತ್ತು. ಆದರೆ, ಇರಾನ್ನಿಂದ ಕುಲಭೂಷಣ್ರನ್ನು ಅಪಹರಿಸಲಾಗಿದೆ ಎಂದು ಭಾರತ ಹೇಳಿತ್ತು.
ಕುಲಭೂಷಣ್ ಜಾಧವ್ ಮೇಲೆ ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪವನ್ನು ಹೊರಿಸಿ ಪಾಕಿಸ್ತಾನಿ ಮಿಲಿಟರಿ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿತ್ತು. ಮಿಲಿಟರಿ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಭಾರತ 2017ರ ಮೇ 8ರಂದು ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ ಇದೇ ವರ್ಷದ ಫೆಬ್ರವರಿಯಲ್ಲಿ ನಾಲ್ಕು ದಿನ ಸಾರ್ವಜನಿಕವಾಗಿ ವಿಚಾರಣೆ ನಡೆಸಿತ್ತು. ಇದೇ ಸಂದರ್ಭದಲ್ಲಿ ಪುಲ್ವಾಮಾ ಉಗ್ರದಾಳಿ ನಡೆದು ಉಭಯ ದೇಶಗಳ ಸಂಬಂಧ ಮತ್ತಷ್ಟು ಹಳಸಿತ್ತು.
ಭಾರತ ಪರವಾಗಿ ಹರೀಶ್ ಸಾಳ್ವೆ ವಾದ ಮಂಡಿಸಿದ್ದು, ಕುಲಭೂಷಣ್ ಜಾಧವ್ ಬಂಧನ ಹಾಗೂ ನಂತರದ ಘಟನಾವಳಿಗಳಲ್ಲಿ ವಿಯೆನ್ನಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಘಟನೆಯ ಕಾಲಾನುಕ್ರಮ: