ವಾಷಿಂಗ್ಟನ್ (ಅಮೆರಿಕ):ರಷ್ಯಾದ ದಾಳಿಗೆ ಸಿಲುಕಿ ತತ್ತರಿಸುತ್ತಿರುವ ಉಕ್ರೇನ್ಗೆ ವಿಶ್ವಬ್ಯಾಂಕ್ ಶೀಘ್ರದಲ್ಲೇ 3 ಬಿಲಿಯನ್ ಡಾಲರ್ ಹಣಕಾಸು ನೆರವು ನೀಡಲು ಮುಂದಾಗಿದೆ. ಅಲ್ಲದೇ ಇದನ್ನು ತುರ್ತು ಅಗತ್ಯ ಎಂದು ಪರಿಗಣಿಸಿ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂಬ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮನವಿ ಪುರಸ್ಕರಿಸಲಿದೆ.
ವಿಶ್ವ ಬ್ಯಾಂಕ್ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಮತ್ತು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರು ಉಕ್ರೇನ್ಗೆ ಹಣಕಾಸು ಇಷ್ಟು ದೊಡ್ಡ ಪ್ಯಾಕೇಜ್ ಘೋಷಣೆಯ ಕುರಿತು ಜಂಟಿ ಹೇಳಿಕೆ ನೀಡಿದ್ದಾರೆ. ಉಕ್ರೇನ್‌ನಲ್ಲಿನ ಯುದ್ಧದಿಂದ ಉಂಟಾದ ಮಾನವ ಪ್ರಾಣ ಹಾನಿ ಮತ್ತು ಭೀಕರತೆ ಆತಂಕ ಮೂಡಿಸಿದೆ. ಸಾವಿರಾರು ಪ್ರಾಣಗಳು ಆಹುತಿಯಾಗಿವೆ.