ಜಿನೇವಾ: ಕೊರೊನಾ ವೈರಸ್ ಯುವರ ಮೇಲೆ ಹೆಚ್ಚು ಪರಿಣಾಮ ಬೀರದು ಎಂಬುದೆಲ್ಲಾ ಸುಳ್ಳು. ಈ ಮಾರಕ ಸೋಂಕಿನಿಂದ ಯುವಕರೇನೂ ಅತೀತರಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಎಚ್ಚರಿಸಿದ್ದಾರೆ.
'ಕೊರೊನಾ ಸೋಂಕಿನಿಂದ ಯುವಕರೇನೂ ಅತೀತರಲ್ಲ; ನೀವೂ ಬದುಕಿ, ನಿಮ್ಮವರನ್ನೂ ಉಳಿಸಿ' - youth warned
ಪ್ರಪಂಚದಾದ್ಯಂತ 10 ಸಾವಿರಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್ ಯುವಕರ ಪ್ರಾಣದ ಮೇಲೂ ತೀವ್ರ ಸ್ವರೂಪದ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಎಚ್ಚರಿಸಿದ್ದಾರೆ.

ಕೊರೊನಾ ಸೋಂಕಿನಿಂದ ಯುವಕರೇನು ಅತೀತರಲ್ಲ
ಕೊರೊನಾ ಸೋಂಕಿನಿಂದ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು. ಈ ವೈರಸ್ ನಿಮ್ಮನ್ನು ವಾರಗಳವರೆಗೆ ಆಸ್ಪತ್ರೆಯಲ್ಲಿ ಇರಿಸಬಹುದು ಅಥವಾ ನಿಮ್ಮ ಪ್ರಾಣವನ್ನೂ ತೆಗೆಯಬಹುದು. ಅನಾರೋಗ್ಯಕ್ಕೆ ತುತ್ತಾಗದಿದ್ದರೂ ನೀವು ಎಲ್ಲಿಗೆ ಹೋಗುತ್ತೀರಿ ಎಂಬುದು ಇತರರ ಬದುಕಿನ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.