ಜಿನೇವಾ: ಕೊರೊನಾ ಸೋಂಕು ಕಡಿಮೆಯಾದ ದೇಶಗಳು ತಮ್ಮ ನಿಯಂತ್ರಣಾ ಕ್ರಮಗಳನ್ನು ಏಕಾ ಏಕಿ ಸಡಿಲಗೊಳಿಸಿದರೆ ಎರಡನೇ ಅಲೆ ಎದುರಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್ಒ) ಎಚ್ಚರಿಸಿದೆ.
ಇಷ್ಟಕ್ಕೆ ಎಲ್ಲಾ ಮುಗಿದಿಲ್ಲ, ಕೊರೊನಾ 2.o ಅಪ್ಪಳಿಸಬಹುದು: ಡಬ್ಲ್ಯುಹೆಚ್ಒ ಎಚ್ಚರಿಕೆ - ಡಬ್ಲ್ಯುಹೆಚ್ಒ ಎಚ್ಚರಿಕೆ
ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎಂದು ಕೆಲ ರಾಷ್ಟ್ರಗಳು ತಮ್ಮ ಸುರಕ್ಷತಾ ಕ್ರಮಗಳನ್ನು ಸಡಿಲಗೊಳಿಸುತ್ತಿವೆ. ಆದರೆ, ಕೊರೊನಾ ಅಲೆಗಳ ರೀತಿ ಈಗ ಮೊದಲ ಅಲೆ ಬಂದು ಹೋಗಿದೆ. ಎರಡನೇ ಅಲೆ ಅಪ್ಪಳಿಸಿದರೂ ಅಪ್ಪಳಿಸಬಹುದು ಎಂದು ಡಬ್ಲ್ಯುಹೆಚ್ಒ ಎಚ್ಚರಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತು ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ರಯಾನ್, ನಾವು ಜಾಗತಿಕವಾಗಿ ಮೊದಲ ತರಂಗದ ಮಧ್ಯದಲ್ಲಿದ್ದೇವೆ. ಅಂದರೆ, ರೋಗ ಇನ್ನೊ ಹೆಚ್ಚುತ್ತಿರುವ ಹಂತದಲ್ಲಿದ್ದೇವೆ. ಕೊರೊನಾ ಸೋಂಕು ಅಲೆಗಳ ರೀತಿ ನಮ್ಮ ಮೇಲೆ ಅಪ್ಪಳಿಸುತ್ತದೆ. ಈಗ ಒಂದು ಅಲೆ ಬಂದು ಹೋಗಿರಬಹುದು ಹಾಗಂತ ನಾವು ನಿರಾಳರಾಗಲು ಸಾಧ್ಯವಿಲ್ಲ ಎರಡನೇ ಅಲೆ ಬರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ಆದ್ದರಿಂದ ಕೊರೊನಾ ಸೋಂಕು ಕಡಿಮೆಯಾಗಿರುವ ರಾಷ್ಟ್ರಗಳು ನಾವು ಸೋಂಕು ಮುಕ್ತರಾಗಿದ್ದೇವೆ ಎಂದು ಸುರಕ್ಷತಾ ಕ್ರಮಗಳನ್ನು ಸಡಿಲಗೊಳಿಸಬಾರದು ಎಂದು ಹೇಳಿದ್ದಾರೆ.