ಕರ್ನಾಟಕ

karnataka

ETV Bharat / international

ಮುಂದಿನ ವರ್ಷಾಂತ್ಯದ ವೇಳೆಗೆ 2 ಬಿಲಿಯನ್​ ಕೋವಿಡ್ ಲಸಿಕೆ ಉತ್ಪಾದನೆ: WHO

ಈ ವರ್ಷದ ಅಂತ್ಯದ ವೇಳೆಗೆ ಒಂದು ಅಥವಾ ಎರಡು ಕೋವಿಡ್​ ಲಸಿಕೆಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಸುಮಾರು 2 ಬಿಲಿಯನ್ನಿನ​ಷ್ಟು ಲಸಿಕೆಗಳನ್ನು ತಯಾರಿಸಲಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

WHO hopes 2 billion Covid-19 vaccine doses by next year
ಡಾ.ಸೌಮ್ಯಾ ಸ್ವಾಮಿನಾಥನ್

By

Published : Jun 19, 2020, 2:59 PM IST

ಲಂಡನ್ : ಮುಂದಿನ ವರ್ಷಾಂತ್ಯದ ವೇಳೆಗೆ ಸುಮಾರು 2 ಬಿಲಿಯನ್​ ಕೋವಿಡ್ ಲಸಿಕೆ ಸಿದ್ಧವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ಜಿನಿವಾದಲ್ಲಿ ಮಾತನಾಡಿದ ಅವರು, ಸದ್ಯ ನಮ್ಮಲ್ಲಿ ಯಾವುದೇ ಲಸಿಕೆ ಇಲ್ಲ. ಆದರೆ ಈ ವರ್ಷದ ಅಂತ್ಯದ ವೇಳೆಗೆ ಒಂದು ಅಥವಾ ಎರಡು ಲಸಿಕೆಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಸುಮಾರು 2 ಬಿಲಿಯನ್​ಷ್ಟು ಲಸಿಕೆಗಳನ್ನು ತಯಾರಿಸಲಾಗುತ್ತದೆ ಎಂದಿದ್ದಾರೆ.

ಕೋವಿಡ್‌ಗೆ ಕಾರಣವಾಗುವ ವೈರಸ್ SARS-CoV-2 ವಿರುದ್ಧ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯನ್ನು ಅಭಿವೃದ್ಧಿಪಡಿಸಲು ಕನಿಷ್ಠ 12 ರಿಂದ 18 ತಿಂಗಳು ಬೇಕಾಗಬಹುದು. ಕಳೆದ ತಿಂಗಳು ಜಾಗತಿಕ ಔಷಧಿಯ ಮುಖ್ಯಸ್ಥರು ಹೇಳಿದಂತೆ ಅಕ್ಟೋಬರ್ ಅಂತ್ಯದ ವೇಳೆಗೆ ಕೋವಿಡ್​ ತಡೆಗಟ್ಟುವ ಲಸಿಕೆ ಸಿದ್ಧವಾಗಬಹುದು ಎಂದು ಹೇಳಿದರು.

ಸದ್ಯ 100 ಕ್ಕೂ ಹೆಚ್ಚು ಲಸಿಕೆಗಳು ಪ್ರಯೋಗ ಹಂತದಲ್ಲಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿದ ಅಸ್ಟ್ರಾಜೆನೆಕಾದ ಕೋವಿಡ್ ಲಸಿಕೆಯು ಒಂದು ವರ್ಷದವರೆಗೆ ಕಾಯಿಲೆಯಿಂದ ರಕ್ಷಿಸುವ ಸಾಧ್ಯತೆ ಇದೆ ಎಂದು ಬ್ರಿಟಿಷ್ ಡ್ರಗ್​ ತಯಾರಕರ ಸಂಸ್ಥೆಯ ಸಿಇಒ ಬೆಲ್ಜಿಯಂನ ರೇಡಿಯೊ ಸ್ಟೇಷನ್ ಬೆಲ್ ಆರ್‌ಟಿಎಲ್‌ಗೆ ತಿಳಿಸಿದ್ದಾರೆ.

ABOUT THE AUTHOR

...view details