ಕರ್ನಾಟಕ

karnataka

ETV Bharat / international

ಕೊರೊನಾ ರೋಗಿಗಳ ಮೇಲೆ ಹೈಡ್ರೋಕ್ಲೋರೋಕ್ವಿನ್ ಪ್ರಯೋಗ ಕೈಬಿಟ್ಟ WHO - ಕೊರೊನಾ ರೋಗಿಗಳಿಗೆ ಪರಿಣಾಮ ಬೀರದ ಹೈಡ್ರೋಕ್ಲೋರೋಕ್ವಿನ್

ಯಾವುದೇ ಸಕಾರಾತ್ಮಕ ಪರಿಣಾಮ ಬೀರದ ಹಿನ್ನೆಲೆ ಕೋವಿಡ್​ ರೋಗಿಗಳ ಮೇಲಿನ ಹೈಡ್ರೋಕ್ಲೋರೋಕ್ವಿನ್, ಲೋಪಿನಾವಿರ್ ಮತ್ತು ರಿಟೊನವಿರ್ ಔಷಧ ಪ್ರಯೋಗವನ್ನು ಕೊನೆಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆ ನಿರ್ಧರಿಸಿದೆ.

WHO ending hydroxycholorquine trial for COVID
ಹೈಡ್ರೋಕ್ಲೋರೋಕ್ವಿನ್ ಪ್ರಯೋಗ ಕೈ ಬಿಟ್ಟ ಡಬ್ಲ್ಯೂಹೆಚ್​ಒ

By

Published : Jul 5, 2020, 12:48 PM IST

ಬರ್ಲಿನ್: ಆಸ್ಪತ್ರೆಗೆ ದಾಖಲಾದ ಕೋವಿಡ್​ ರೋಗಿಗಳ ಮೇಲೆ ಮಲೇರಿಯಾ ಔಷಧ ಹೈಡ್ರೋಕ್ಲೋರೋಕ್ವಿನ್ ಪ್ರಯೋಗವನ್ನು ನಿಲ್ಲಿಸುತ್ತಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್​ಒ) ತಿಳಿಸಿದೆ.

ಕೋವಿಡ್​ ರೋಗಿಗಳ ಮೇಲೆ ಮಲೇರಿಯಾ ಔಷಧ ಹೈಡ್ರೋಕ್ಲೋರೋಕ್ವಿನ್, ಹೆಚ್​​ಐವಿ/ಏಡ್ಸ್​ ಔಷಧ ಲೋಪಿನಾವಿರ್ ಮತ್ತು ರಿಟೊನವಿರ್ ಪ್ರಯೋಗವನ್ನು ನಿಲ್ಲಿಸುವಂತೆ ಮಾಡಿರುವ ಮೇಲ್ವಿಚಾರಣಾ ಸಮಿತಿ ಶಿಫಾರಸ್ಸನ್ನು ಅಂಗೀಕರಿಸಲಾಗಿದೆ ಎಂದು ಡಬ್ಲ್ಯೂಹೆಚ್​ಒ ಹೇಳಿದೆ.

ಮಧ್ಯಂತರ ಫಲಿತಾಂಶದ ಪ್ರಕಾರ ಹೈಡ್ರೋಕ್ಲೋರೋಕ್ವಿನ್, ಲೋಪಿನಾವಿರ್ ಮತ್ತು ರಿಟೊನವಿರ್ ಕೋವಿಡ್ ರೋಗಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇದು ರೋಗಿಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಿಲ್ಲ. ಹೀಗಾಗಿ ಪ್ರಯೋಗವನ್ನು ನಿಲ್ಲಿಸಲಾಗುತ್ತಿದೆ ಎಂದು ಡಬ್ಲ್ಯೂಹೆಚ್​ಒ ಹೇಳಿದೆ. ಲಸಿಕೆ ಪ್ರಯೋಗಿಸಿದ ಬಳಿಕ ಕೋವಿಡ್ ರೋಗಿಗಳ ಮರಣ ಪ್ರಮಾಣ ಹೆಚ್ಚಾದ ಬಗ್ಗೆಯೂ ಯಾವುದೇ ಪುರಾವೆಗಳಿಲ್ಲ. ಆದರೆ, ಕ್ಲಿನಿಕಲ್ ಪ್ರಯೋಗಾಲಯದ ಸಂಶೋಧನೆಗಳಲ್ಲಿ ಕೆಲವು ಸುರಕ್ಷತಾ ಸಂಕೇತಗಳು ಕಂಡು ಬಂದಿವೆ ಎಂದು ತಿಳಿಸಿದೆ.

ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಅಥವಾ ಕೊರೊನಾ ವೈರಸ್​ಗೆ ತುತ್ತಾಗುವ ಮೊದಲು ಅಥವಾ ನಂತರ ಈ ಔಷಧಗಳನ್ನು ಸ್ವೀಕರಿಸಿದವರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಡಬ್ಲ್ಯೂಹೆಚ್​ಒ ಹೇಳಿದೆ.

ABOUT THE AUTHOR

...view details