ಜಿನೀವಾ [ಸ್ವಿಟ್ಜರ್ಲೆಂಡ್] :ಕೊರೊನಾ ವೈರಸ್ ಆರಂಭದಿಂದಲೂ ಇಲ್ಲಿಯವರೆಗೆ ಡಬ್ಲ್ಯೂಹೆಚ್ಒ ಮುಖ್ಯ ಕಚೇರಿಯ 65 ಸಿಬ್ಬಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿದೆ.
ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ, ಸೋಂಕು ತಗುಲಿರುವ ಸಿಬ್ಬಂದಿ ಮನೆ ಮತ್ತು ವ್ಯವಸ್ಥಿತ ಸ್ಥಳದಿಂದ ಕೆಲಸ ಮಾಡುತ್ತಿದ್ದಾರೆ. ಕಚೇರಿ ಆವರಣದಲ್ಲಿ ವೈರಸ್ ಹರಡಿದೆಯೇ ಎಂಬುದರ ಮಾಹಿತಿಯಿಲ್ಲ, ಈ ಬಗ್ಗೆ ಕ್ರಮ ವಹಿಸಲಾಗಿದೆ ಎಂದು ಡಬ್ಲ್ಯೂಹೆಚ್ಒ ಟ್ವೀಟ್ ಮಾಡಿದೆ.