ಜಿನೀವಾ: ಮಹಿಳೆಯರು, ಮಕ್ಕಳು ಹಾಗೂ ಹದಿಹರೆಯದವರ ಮೇಲೆ ಕೋವಿಡ್-19 ಬೀರುವ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (WHO), ಈ ಕುರಿತು 'ವಿಶೇಷ ಕಾಳಜಿ ವಹಿಸಲಾಗಿದೆ' ಎಂದು ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಸೋಂಕಿಗೆ ಬಲಿಯಾಗುವವರಿಗಿಂತಲೂ ಈ ವರ್ಗದವರ ಮೇಲೆ ಕೊರೊನಾ ಪರೋಕ್ಷ ಪರಿಣಾಮಗಳನ್ನು ಬೀರಲಿದೆ. ಏಕೆಂದರೆ ಜಾಗತಿಕ ಸಾಂಕ್ರಾಮಿಕ ಕೋವಿಡ್ ಆರೋಗ್ಯ ವ್ಯವಸ್ಥೆಯನ್ನೇ ಹದಗೆಡಿಸಿದ್ದು, ಮಹಿಳೆಯರು ಗರ್ಭಾವಸ್ಥೆ ಹಾಗೂ ಹೆರಿಗೆಯ ಸಮಯದಲ್ಲಿ ಸಾಯುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದ್ದಾರೆ.