ಜಿನೀವಾ: ಫೈಜರ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ಈ ಮೂಲಕ ಲಸಿಕೆಯನ್ನು ಶೀಘ್ರವೇ ಆಮದು ಮಾಡಿಕೊಂಡು ವಿತರಿಸಲು ದೇಶಗಳಿಗೆ ಅನುವು ಮಾಡಿಕೊಟ್ಟಿದೆ.
ಪ್ರತಿಯೊಂದು ದೇಶವು ಯಾವುದೇ ಕೊರೊನಾ ಲಸಿಕೆ ಬಳಕೆಗೆ ತನ್ನದೇ ಆದ ಅನುಮೋದನೆಯನ್ನು ನೀಡಬೇಕಾಗುತ್ತದೆ. ಆದರೆ ದುರ್ಬಲ ವ್ಯವಸ್ಥೆಗಳನ್ನು ಹೊಂದಿರುವ ದೇಶಗಳು ಲಸಿಕೆಗಾಗಿ ಸಾಮಾನ್ಯವಾಗಿ WHO ಅನ್ನು ಅವಲಂಬಿಸಿರುತ್ತವೆ.
ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಯುರೋಪಿಯನ್ ಯೂನಿಯನ್ ಮತ್ತು ಇತರ ದೇಶಗಳಲ್ಲಿ ಈಗಾಗಲೇ ಫೈಜರ್-ಬಯೋಟೆಕ್ ಲಸಿಕೆ ಕ್ಲಿಯರೆನ್ಸ್ ಪಡೆದಿದೆ ಎಂದು ಡಬ್ಲ್ಯೂಎಚ್ಓ ಹೇಳಿದೆ.