ಕರ್ನಾಟಕ

karnataka

ETV Bharat / international

10 ಮಿಲಿಯನ್ ಕೋವಿಡ್​ ಲಸಿಕೆ ದಾನ ಮಾಡುವಂತೆ ಶ್ರೀಮಂತ ರಾಷ್ಟ್ರಗಳಿಗೆ WHO ಮನವಿ

ಶ್ರೀಮಂತ ದೇಶಗಳು ಕನಿಷ್ಠ 10 ಮಿಲಿಯನ್ ಕೊರೊನಾ ವೈರಸ್ ಲಸಿಕೆಯನ್ನು ದಾನ ಮಾಡುವುದರಿಂದ ಯುಎನ್ ಆರೋಗ್ಯ ಸಂಸ್ಥೆ 2021 ರ ಮೊದಲ 100 ದಿನಗಳಲ್ಲಿ ಎಲ್ಲಾ ದೇಶಗಳಲ್ಲಿ ಲಸಿಕೆ ನೀಡುವ ಗುರಿ ತಲುಪಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಮನವಿ ಮಾಡಿಕೊಂಡಿದ್ದಾರೆ.

ಕೋವಿಡ್​ ಲಸಿಕೆ
ಕೋವಿಡ್​ ಲಸಿಕೆ

By

Published : Mar 27, 2021, 11:32 AM IST

ಜಿನೀವಾ: ಶ್ರೀಮಂತ ರಾಷ್ಟ್ರಗಳು ಕನಿಷ್ಠ 10 ಮಿಲಿಯನ್ ಕೊರೊನಾ ವೈರಸ್ ಲಸಿಕೆಗಳನ್ನು ದಾನ ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ವಿನಂತಿ ಮಾಡಿದ್ದಾರೆ.

ಎಲ್ಲಾ ದೇಶಗಳಿಗೆ ಕೊರೊನಾ ಲಸಿಕೆ ಒದಗಿಸುವ ಯೋಜನೆ ರೂಪಿಸಿಕೊಂಡಿದ್ದು, ಶ್ರೀಮಂತ ದೇಶಗಳು ಕನಿಷ್ಠ 10 ಮಿಲಿಯನ್ ಕೊರೊನಾ ವೈರಸ್ ಲಸಿಕೆಯನ್ನು ದಾನ ಮಾಡಿದರೆ, ಯುಎನ್ ಆರೋಗ್ಯ ಸಂಸ್ಥೆ 2021 ರ ಮೊದಲ 100 ದಿನಗಳಲ್ಲಿ ಎಲ್ಲಾ ದೇಶಗಳಲ್ಲಿ ಲಸಿಕೆ ನೀಡುವ ಗುರಿ ತಲುಪಬಹುದು. ಸುಮಾರು 20 ದೇಶಗಳು ಇನ್ನೂ ತಮ್ಮ ಮೊದಲನೇ ಹಂತದ ಲಸಿಕೆ ವಿತರಣೆಗಾಗಿ ಕಾಯುತ್ತಿವೆ ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಗೆ ಮುಂದಾಗಬೇಕು. ಇದರಿಂದಾಗಿ ಹೆಚ್ಚುವರಿ ಲಸಿಕೆಗಳನ್ನು ಬಡ ದೇಶಗಳಿಗೆ ದಾನ ಮಾಡಬಹುದು. ಈ ಹಿಂದೆ ಹಲವಾರು ದೇಶಗಳು ಖಾಸಗಿ ಒಪ್ಪಂದಗಳನ್ನು ಮಾಡಿಕೊಂಡ ಹಿನ್ನೆಲೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಲಸಿಕೆ ವಿತರಣೆಗೆ ಹೊಡೆತ ಬಿದ್ದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ABOUT THE AUTHOR

...view details