ಕರ್ನಾಟಕ

karnataka

ETV Bharat / international

ಹಿಂದೆಂದೂ ನೀವು ನೋಡಿರದ ಲಂಡನ್​:  ಉದ್ಯಾನವೇ ಈಗ ವೈರಸ್ ಪರೀಕ್ಷಾ ಕೇಂದ್ರ - ಕೊರನಾ

ಕೊರನಾ ಭೀತಿ ಇಡೀ ಜಗತ್ತನ್ನೇ ಕಾಡುತ್ತಿದ್ದು, ಪ್ರಜೆಗಳ ಜೀವ ರಕ್ಷಣೆಗೆ ಎಲ್ಲ ದೇಶಗಳು ಹೆಣಗಾಡುತ್ತಿವೆ. ಈ ಹಿನ್ನೆಲೆ ಲಂಡನ್​ನ ಉದ್ಯಾನವನವೊಂದರಲ್ಲಿ ಎನ್‌ಎಚ್‌ಎಸ್ ವತಿಯಿಂದ ಕಾರ್ಮಿಕರಿಗೆ ಕೊರೊನಾ ಪರೀಕ್ಷೆ ನಡೆಸಲಾಯಿತು.

Aerials of London parks
ಲಂಡನ್​ ಉದ್ಯಾನವನದ ವಿಹಂಗಮ ನೋಟ

By

Published : Apr 28, 2020, 8:35 PM IST

ಲಂಡನ್:ಯುನೈಟೆಡ್​​ ಕಿಂಗ್​ಡಮ್​​ನ ರಾಜಧಾನಿ ಲಂಡನ್‌ನ ಹೆಗ್ಗುರುತಾಗಿರುವ ಓ-2 ಸ್ಥಳದ ಸಮೀಪದ ಉದ್ಯಾನದಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ನಿಂದ ಕಾರ್ಮಿಕರಿಗಾಗಿ ಕೋವಿಡ್​-19 ಡ್ರೈವ್ - ಥ್ರೂ ಪರೀಕ್ಷೆಯನ್ನು ಸೋಮವಾರ ಆಯೋಜಿಸಲಾಯಿತು.

ಎನ್‌ಎಚ್‌ಎಸ್ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗಾಗಿ ನಿಗದಿ ಪಡಿಸಲಾದ ಉದ್ಯಾನದ ಕಾರ್ ಪಾರ್ಕಿಂಗ್​​ ಸ್ಥಳವನ್ನು ಕ್ಯಾಮೆರಾದ ಮೂಲಕ ಏರಿಯಲ್(ವೈಮಾನಿಕ) ನೋಟದಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್​ ಆಗ ತೊಡಗಿದೆ.

ಲಂಡನ್​ ಉದ್ಯಾನದ ವಿಹಂಗಮ ನೋಟ

ಡ್ರೈವ್-ಥ್ರೂ ಪರೀಕ್ಷೆಯಲ್ಲಿ ಹೆಚ್ಚಿನ ಜನರಿಗೆ, ಕೊರೊನಾ ವೈರಸ್ ಲಕ್ಷಣಗಳಾದ ಜ್ವರ ಮತ್ತು ಕೆಮ್ಮಿನಂತಹ ಲಕ್ಷಣಗಳು ಕಂಡುಬಂದಿದ್ದಾದರೂ, ಇದು ಕೊರೊನಾ ವೈರಸ್​ ಎಂದು ಖಾತರಿಯಾಗಿಲ್ಲ.

ಆದರೆ, ಇದು ನ್ಯುಮೋನಿಯಾ ಸೇರಿದಂತೆ ಕೆಲವು ತೀವ್ರವಾದ ಕಾಯಿಲೆಗೆ ಕಾರಣವಾಗಬಹುದು ಮತ್ತು ಕೆಲವು ಜನರಿಗೆ, ವಿಶೇಷವಾಗಿ ವಯಸ್ಸಾದವರಿಗೆ ಮತ್ತು ಈಗಾಗಲೇ ಆರೋಗ್ಯ ಸಮಸ್ಯೆಗಳಿರುವವರಿಗೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಪರೀಕ್ಷೆಯ ನಂತರದ ವರದಿಯಲ್ಲಿ ತಿಳಿಸಲಾಗಿದೆ.

ಯುನೈಟೆಡ್ ಕಿಂಗ್‌ಡಂನಲ್ಲಿ ಪ್ರಸ್ತುತ ಹೊಸ ಕೊರೊನಾ ವೈರಸ್ ಪ್ರಕರಣಗಳು 1,54,037 ಆಗಿದ್ದು, ಇದೂವರೆಗೆ 20,795 ಸಾವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಭಾನುವಾರ ತಿಳಿಸಿದೆ.

ABOUT THE AUTHOR

...view details