ಮಾಸ್ಕೋ (ರಷ್ಯಾ): ಇಂದಿನಿಂದ ರಷ್ಯಾದಲ್ಲಿ ಸಂಸತ್ ಚುನಾವಣೆ ನಡೆಯಲಿದ್ದು, ಮತದಾನ ಆರಂಭಗೊಂಡಿದೆ. ರಾಜಧಾನಿ ಮಾಸ್ಕೋಗಿಂತಲೂ ಒಂಬತ್ತು ಗಂಟೆಗಳ ಮುಂಚಿತವಾಗಿ ದೂರದ ಪೂರ್ವ ಪ್ರದೇಶಗಳಾದ ಕಮ್ಚಟ್ಕಾ ಮತ್ತು ಚುಕೊಟ್ಕಾದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. .
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪಕ್ಷ ರಷ್ಯಾ ಸಂಸತ್ನ ಕೆಳಮನೆ ಡೂಮಾಕ್ಕೆ ಚುನಾವಣೆ ನಡೆಯುತ್ತಿದೆ. ಪ್ರತಿಸ್ಪರ್ಧಿಯಾಗಿ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಪಕ್ಷ ಪ್ರಬಲ ಪೈಪೋಟಿ ನೀಡುತ್ತಿದೆ. ಈಗಾಗಲೇ ನಾಲ್ಕು ಬಾರಿ ಅಧ್ಯಕ್ಷರಾಗಿ ರಷ್ಯಾವನ್ನು ಆಳಿರುವ ಪುಟಿನ್, ತಮ್ಮ ಪಕ್ಷ ಮತ್ತೆ ಗೆಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಪುಟಿನ್ ಅವರು 2000-2004, 2004-2008, 2012- 2018 ಮತ್ತು 2018ರ ಮೇ ತಿಂಗಳಿನಿಂದ ಇಲ್ಲಿಯವರೆಗೆ ರಷ್ಯಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈಗ ಐದನೇ ಬಾರಿ ಅಧ್ಯಕ್ಷರಾಗಿ ಆಯ್ಕೆ ಆಗಲು ಈಗಿನ ಕಾನೂನಿನಂತೆ ಪುಟಿನ್ಗೆ ಅವಕಾಶ ಇಲ್ಲ. ಹಾಗಾಗಿ ವ್ಲಾಡಿಮಿರ್ ಪುಟಿನ್ ಅಧ್ಯಕ್ಷರಾಗಿ ಮುಂದುವರೆಯಲು ಸಂವಿಧಾನ ತಿದ್ದುಪಡಿಗೆ ಮುಂದಾಗಿದ್ದಾರೆ. ಪ್ರಸ್ತುತ ರಷ್ಯಾ ಸಂಸತ್ನ ಕೆಳಮನೆ ಡುಮಾದಲ್ಲಿ ಪುಟಿನ್ರ ಯುನೈಟೆಡ್ ರಷ್ಯಾ ಪಕ್ಷ 3ನೇ 2ರಷ್ಟು ಬಹುಮತ ಹೊಂದಿದೆ.
2020ರಲ್ಲೇ ನಡೆಯಬೇಕಿದ್ದ ಚುನಾವಣೆ