ಗ್ಲಾಸ್ಗೋ : ಜಾಗತಿಕ ಸಮಸ್ಯೆಯಾಗಿರುವ ತಾಪಮಾನ ಏರಿಕೆ ಕುರಿತ ಸಮ್ಮೇಳನದಲ್ಲಿ ವಿಶ್ವದ ದಿಗ್ಗಜ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ವಿಶ್ವದ ಪ್ರಮುಖ ನಾಯಕರು ಹವಾಮಾನ ವೈಪರೀತ್ಯ ಕುರಿತ ಭಾಷಣ ಮಾಡಿದ್ದು, ಭಾರತವೂ ಸಹ ಇಲ್ಲಿ ತನ್ನ ನಿಲುವು ಪ್ರಸ್ತಾಪಿಸಿದೆ.
ಆದರೆ, ವಿಶ್ವನಾಯಕರ ಭಾಷಣ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿದ್ರೆಗೆ ಜಾರಿರುವುದು ಸೆರೆಯಾಗಿದೆ. ಕಾಪ್ 26 ಶೃಂಗಸಭೆಯ ಭಾಷಣದ ವೇಳೆ ಬೈಡನ್ ದೀರ್ಘ ಸಮಯ ನಿದ್ರೆಗೆ ಜಾರಿದ್ದರು. ನಿಗದಿತ ಆಸನದಲ್ಲಿ ಮಾಸ್ಕ್ ಧರಿಸಿ ಕುಳಿತಿದ್ದ ಅವರು, ಕುಳಿತಲ್ಲಿಯೇ ನಿದ್ರೆಗೆ ಜಾರಿದ್ದರು.