ವಾಷಿಂಗ್ಟನ್ :ಉಕ್ರೇನ್ ಮೇಲೆ ದಾಳಿ ಮಾಡಿರುವ ರಷ್ಯಾದ ಸೇನೆಗೆ ಮಿತ್ರ ರಾಷ್ಟ್ರವಾದ ಬೆಲಾರಸ್ ಬೆಂಬಲ ನೀಡಿ ಯುದ್ಧ ಕಣಕ್ಕೆ ಇಳಿಯಲಿದೆ ಎಂದು ಅಮೆರಿಕ ಹೇಳಿದೆ. ಒಂದು ವೇಳೆ ಇದು ನಿಜವಾದಲ್ಲಿ ಮೂರನೇ ಮಹಾಯುದ್ಧ ನಡೆಯುವ ಎಲ್ಲಾ ಸಾಧ್ಯತೆಗಳಿವೆ.
ಯುದ್ಧದಲ್ಲಿ ಬೆಲಾರಸ್ ರಷ್ಯಾಗೆ ಬೆಂಬಲವಾಗಿದೆ. ಅದು ಈವರೆಗೂ ನೇರವಾಗಿ ಸಂಘರ್ಷಕ್ಕೆ ಇಳಿದಿಲ್ಲ. ಗುಪ್ತಚರ ಮಾಹಿತಿಯ ಪ್ರಕಾರ ಬೆಲಾರಸ್ ನೇರ ಯುದ್ಧಕ್ಕೆ ಜಿಗಿಯಬೇಕೇ? ಬೇಡವೇ? ಎಂಬುದು, ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯಲಿರುವ ಒಪ್ಪಂದದ ಬಳಿಕ ನಿರ್ಧರಿಸಲಿದೆ.
ಒಂದು ವೇಳೆ ಉಕ್ರೇನ್ ಶಾಂತಿ ಒಪ್ಪಂದ ಮಾಡಿಕೊಳ್ಳದಿದ್ದರೆ, ರಷ್ಯಾದ ಜೊತೆಗೂಡಿ ಬೆಲಾರಸ್ ಸೈನಿಕರು ಉಕ್ರೇನ್ ಮೇಲೆ ಯುದ್ಧ ಮಾಡಲಿದ್ದಾರೆ ಎಂದು ಅಮೆರಿಕ ಗುಪ್ತಚರ ಇಲಾಖೆ ತಿಳಿಸಿದೆ.
ಉಕ್ರೇನ್ ಯೋಧರ ಭಾರಿ ಪ್ರತಿರೋಧದಿಂದ ರಷ್ಯಾ ಪಡೆಗಳು ಪ್ರಮುಖ ನಗರಗಳಿಗೆ ಮುನ್ನುಗ್ಗಲು ಹರಸಾಹಸ ಪಡುತ್ತಿವೆ. ಕೀವ್, ಕ್ರೆಮ್ಲಿನ್ ನಗರಗಳ ಪ್ರವೇಶ ವಿಳಂಬವಾಗುತ್ತಿರುವುದಕ್ಕೆ ಉಕ್ರೇನ್ ಯೋಧರ ಪ್ರತಿರೋಧವೇ ಕಾರಣ ಎಂದು ಅಮೆರಿಕ ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ಓದಿ:ಒಳ ಹೋರಾಟ.. ಜರ್ಮನಿ, ಅಮೆರಿಕ ಬಳಿಕ ಬೆಲ್ಜಿಯಂನಿಂದ ಉಕ್ರೇನ್ಗೆ ಶಸ್ತ್ರಾಸ್ತ್ರ ನೆರವು