ಕರ್ನಾಟಕ

karnataka

ETV Bharat / international

ಜಾರ್ಜ್ ಫ್ಲಾಯ್ಡ್, ವರ್ಣಭೇದ ನೀತಿಯ ಸಂತ್ರಸ್ತರ ಗೌರವಾರ್ಥ ವಾಟಿಕನ್​​​ನಲ್ಲಿ ಪ್ರಾರ್ಥನೆ - ಮಿನ್ನಿಯಾಪೋಲಿಸ್‌

ಮೃತ ಫ್ಲಾಯ್ಡ್​ನೊಂದಿಗೆ ಪೊಲೀಸರ ಕ್ರೂರ ವರ್ತನೆ ಖಂಡನೀಯ ಎಂದು ವ್ಯಾಟಿಕನ್‌ನ ಲೈಟಿ ಆಫೀಸ್‌ನ ಮುಖ್ಯಸ್ಥ ಕಾರ್ಡಿನಲ್ ಕೆವಿನ್ ಫಾರೆಲ್ ಹೇಳಿದ್ದಾರೆ.

vatican
vatican

By

Published : Jun 6, 2020, 11:44 AM IST

ರೋಮ್ (ಇಟಲಿ): ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆ ಹಾಗೂ ಅನ್ಯಾಯವನ್ನು ವ್ಯಾಟಿಕನ್​ ಸಿಟಿಯಲ್ಲಿ ಖಂಡಿಸಲಾಗಿದೆ.

ಮಿನ್ನಿಯಾಪೊಲೀಸ್‌ನಲ್ಲಿ ಬಂಧನಕ್ಕೊಳಗಾದ ಫ್ಲಾಯ್ಡ್​ನೊಂದಿಗೆ ಪೊಲೀಸರ ಕ್ರೂರ ವರ್ತನೆ ಖಂಡನೀಯ ಎಂದು ವ್ಯಾಟಿಕನ್‌ನ ಲೈಟಿ ಆಫೀಸ್‌ನ ಮುಖ್ಯಸ್ಥ ಕಾರ್ಡಿನಲ್ ಕೆವಿನ್ ಫಾರೆಲ್ ಹೇಳಿದ್ದಾರೆ.

ಪ್ರಾರ್ಥನಾ ಸಭೆ

ರೋಮ್ ಮೂಲದ ಕ್ಯಾಥೊಲಿಕ್ ಚಾರಿಟಿ ಪೋಪ್ ಫ್ರಾನ್ಸಿಸ್‌ಗೆ ಹತ್ತಿರವಿರುವ ಸ್ಯಾಂಟ್ ಎಜಿಡಿಯೊ ಸಮುದಾಯವು ಆಯೋಜಿಸಿದ್ದ ಫ್ಲಾಯ್ಡ್ ಮತ್ತು ವರ್ಣಭೇದ ನೀತಿಯ ಸಂತ್ರಸ್ತರ ಗೌರವಾರ್ಥ ನಡೆಸಿದ ಪ್ರಾರ್ಥನಾ ಸಭೆಯಲ್ಲಿ ಕೆವಿನ್ ಫಾರೆಲ್ ಅಧ್ಯಕ್ಷತೆ ವಹಿಸಿದ್ದರು.

ಫ್ಲಾಯ್ಡ್ ತನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ ಬಳಿಕವೂ ಪೊಲೀಸ್ ಅಧಿಕಾರಿಯೊಬ್ಬರು ಮೊಣಕಾಲಿನ ಮೂಲಕ ಫ್ಲಾಯ್ಡ್​ನ ಕುತ್ತಿಗೆ ಒತ್ತಿದ ಕಾರಣ ಆತ ಸಾವನ್ನಪ್ಪಿರುವುದು ಪೊಲೀಸ್ ಅಧಿಕಾರಿಯ ಕ್ರೂರವರ್ತನೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ABOUT THE AUTHOR

...view details