ಬ್ರಸೆಲ್ಸ್ (ಬೆಲ್ಜಿಯಂ) :ಉಕ್ರೇನ್ ಅಧ್ಯಕ್ಷರ ಕೋರಿಕೆಯ ಮೇರೆಗೆ ಅಮೆರಿಕಾ, ಜರ್ಮನಿ ಸ್ಟಿಂಗರ್ ಮಿಸೈಲ್ ಸರಬರಾಜು ಮಾಡುವುದಕ್ಕೆ ಒಪ್ಪಿದ ಬಳಿಕ, ಇದೀಗ ಬೆಲ್ಜಿಯಂ ಕೂಡ ಉಕ್ರೇನ್‌ಗೆ ತನ್ನ 'ಫೈಟರ್ ಜೆಟ್'ಗಳನ್ನು ರಷ್ಯಾ ವಿರುದ್ಧದ ಹೋರಾಟಕ್ಕೆ ಕಳುಹಿಸಲು ಮುಂದಾಗಿದೆ.
ರಷ್ಯಾ ವಿರುದ್ಧ ಉಕ್ರೇನ್ ಹೋರಾಡಲು ನಮ್ಮ ಫೈಟರ್ ಜೆಟ್ಗಳನ್ನು ಕಳುಹಿಸುತ್ತಿದ್ದೇವೆ. ನಾವು ಮದ್ದು ಗುಂಡುಗಳನ್ನು ನೀಡುವ ಬಗ್ಗೆ ಹೇಳಿಲ್ಲ. ಉಕ್ರೇನ್ ಯುದ್ಧಕ್ಕೆ ಹೋಗಲು ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ನೀಡಲು ಬಯಸಿದ್ದೇವೆ ಎಂದು ವಿದೇಶಾಂಗ ಇಲಾಖೆ ಮುಖ್ಯಸ್ಥ ಜೋಸೆಫ್ ಬೊರೆಲ್ ಹೇಳಿದ್ದಾರೆ.