ಜಿನೀವಾ:ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 6.60 ಲಕ್ಷ ಜನರು ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ. ನಿನ್ನೆಗೆ ಹೋಲಿಸಿದರೆ ಇದು 1.60 ಲಕ್ಷ ಹೆಚ್ಚಿದೆ. ಒಂದು ದಿನದ ಹಿಂದೆ ಇದು 5 ಲಕ್ಷ ಇತ್ತು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಮಾಹಿತಿ ನೀಡಿದೆ.
ಉಕ್ರೇನ್ ಯುದ್ಧ ಸಂತ್ರಸ್ತರ ಪಲಾಯನವು ಈ ಶತಮಾನದಲ್ಲಿಯೇ ಅತ್ಯಧಿಕ ದೊಡ್ಡ ವಲಸೆಯಾಗಿದೆ. ಇದು ರಷ್ಯಾದ ದಾಳಿಯಿಂದ ತಪ್ಪಿಸಿಕೊಳ್ಳಲು ಉಕ್ರೇನ್‌ನಲ್ಲಿ ವಾಸಿಸುತ್ತಿರುವ ವಿವಿಧ ರಾಷ್ಟ್ರಗಳ ಪ್ರಜೆಗಳು ಸೇರಿದಂತೆ ಉಕ್ರೇನಿಯನ್ನರು ಕೂಡ ದೇಶ ತೊರೆಯುತ್ತಿದ್ದಾರೆ. ಅವರನ್ನು ಯಾವ ದೇಶಗಳೂ ಗಡಿ ಪ್ರವೇಶಿಸದಂತೆ ತಡೆಯಬಾರದು ಎಂದು ವಿಶ್ವಸಂಸ್ಥೆಯ ಹೈ ಕಮಿಷನರ್‌ನ ವಕ್ತಾರರಾದ ಶಾಬಿಯಾ ಮಾಂಟೂ ಮನವಿ ಮಾಡಿದ್ದಾರೆ.
ಉಕ್ರೇನ್ನಲ್ಲಿನ ಹಿಂಸಾಚಾರದಿಂದ ತಪ್ಪಿಸಿಕೊಂಡು ನೆರೆಯ ರಾಷ್ಟ್ರಗಳಿಗೆ ಬರುತ್ತಿರುವ ವಲಸಿಗರಿಗೆ ಆಯಾ ದೇಶಗಳು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
1. ಪ್ರತಿಭಟನಾಕಾರರ ಬಿಡುಗಡೆಗೆ ಆಗ್ರಹ:ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯ ವಿರುದ್ಧ ಸ್ವದೇಶಿಯರು ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ವ್ಲಾಡಿಮಿರ್ ಪುಟಿನ್ ಸರ್ಕಾರ ಪ್ರತಿಭಟನಾಕಾರರನ್ನು ಬಂಧಿಸಿದೆ. ಎಲ್ಲ ಬಂಧಿತರನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೋರಾಟ ವಿಭಾಗ ಒತ್ತಾಯಿಸಿದೆ.