ಲಂಡನ್: ಭಾರತದಲ್ಲಿ ಶಾಂತಿಪಾಲನಾ ಕಾರ್ಯಾಚರಣೆಗಾಗಿ 38 ಮಿಲಿಯನ್ ಅಮೆರಿಕನ್ ಡಾಲರ್ ನೀಡುವುದಾಗಿ ವಿಶ್ವಸಂಸ್ಥೆ ಘೋಷಣೆ ಮಾಡಿದೆ.
ಗಮನಾರ್ಹ ಅಂಶವೆಂದರೆ ವಿಶ್ವಸಂಸ್ಥೆ ಯಾವುದೇ ದೇಶಕ್ಕೂ ಇಷ್ಟೊಂದು ಹಣವನ್ನು ನೀಡುತ್ತಿಲ್ಲ. ಮಾರ್ಚ್ 2019ಕ್ಕೆ ಅನ್ವಯವಾಗುವಂತೆ ವಿಶ್ವಸಂಸ್ಥೆ ಹಣ ನೀಡುತ್ತಿರುವುದಾಗಿ ಪ್ರಧಾನ ಕಾರ್ಯದರ್ಶಿ ಅಂಟಾನಿಯೋ ಗುಟೆರೆಸ್ ಹೇಳಿದ್ದಾರೆ.
ರಂವಾಡ (31 ಮಿಲಿಯನ್ ಅಮೆರಿಕನ್ ಡಾಲರ್), ಪಾಕಿಸ್ತಾನ( 28 ಮಿಲಿಯನ್ ಅಮೆರಿಕನ್ ಡಾಲರ್), ಬಾಂಗ್ಲಾದೇಶ (25 ಮಿಲಿಯನ್ ಅಮೆರಿಕನ್ ಡಾಲರ್) ಹಾಗೂ ನೇಪಾಳ( 23 ಮಿಲಿಯನ್ ಅಮೆರಿಕನ್ ಡಾಲರ್) ದೇಶಗಳು ವಿಶ್ವಸಂಸ್ಥೆಯಿಂದ ಶಾಂತಿಪಾಲನಾ ಕಾರ್ಯಾಚರಣೆಗೆನೆರವುಪಡೆಯಲಿವೆ.
ಮುಂದುವರೆಯುತ್ತಿರುವ ದೇಶಗಳ ಜೊತೆಗೆ ಆರ್ಥಿಕವಾಗಿ ಹಿಂದುಳಿದಿರುವ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ನೀಡಲಿರುವ ಹಣ ಸಹಾಯಕಾರಿಯಾಗಲಿದೆ ಎಂದು ಅಂಟಾನಿಯೋ ಹೇಳಿದ್ದಾರೆ.