ಲಂಡನ್: ಕೊರೊನಾ ಸೋಂಕು ಬಾಧಿಸಿದ ಕಾರಣ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಸದ್ಯ ಚೇತರಿಕೆಯ ಹಂತದಲ್ಲಿದ್ದಾರೆ.
ಚೇತರಿಕೆಯ ಹಾದಿ ಹಿಡಿದ ಬ್ರಿಟನ್ ಪ್ರಧಾನಿ: ಐಸಿಯುನಿಂದ ಜನರಲ್ ವಾರ್ಡ್‌ಗೆ ಶಿಫ್ಟ್ - British Prime Minister Boris Johnson
ಕೋವಿಡ್-19 ಲಕ್ಷಣಗಳು ಕಂಡುಬಂದ ಕಾರಣ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಸೋಮವಾರದಿಂದ ಸೇಂಟ್ ಥಾಮಸ್ ಆಸ್ಪತ್ರೆಯ ಐಸಿಯುನಲ್ಲಿರಿಸಲಾಗಿತ್ತು.
ಕೋವಿಡ್ 19 ನಿಂದ ಚೇತರಿಕೆಯ ಹೆಜ್ಜೆ ಇಡುತ್ತಿರುವ ಬ್ರಿಟನ್ ಪ್ರಧಾನಿ
ಬ್ರಿಟಿಷ್ ಪ್ರಧಾನಿಗೆ ಸೋಮವಾರದಿಂದ ಸೇಂಟ್ ಥಾಮಸ್ ಆಸ್ಪತ್ರೆಯ ಐಸಿಯುನಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರನ್ನು ಜನರಲ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು ನುರಿತ ವೈದ್ಯರ ತಂಡ ವಿಶೇಷ ಕಾಳಜಿವಹಿಸಿದೆ.
ಜಾನ್ಸನ್ ಆರೋಗ್ಯಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ ಎಂದು ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಪ್ರಧಾನಿ ಕಚೇರಿ ತಿಳಿಸಿದೆ.