ಕರ್ನಾಟಕ

karnataka

ETV Bharat / international

ರಷ್ಯಾ ದಾಳಿ ತಡೆಗೆ ಸೇತುವೆ ಜೊತೆಗೆ ತನ್ನನ್ನೇ ಸ್ಫೋಟಿಸಿಕೊಂಡ ಉಕ್ರೇನ್​ ಯೋಧ!

ರಷ್ಯಾ ಮಿಲಿಟರಿ ದಾಳಿಗೆ ಉಕ್ರೇನ್​ ಅಕ್ಷರಶಃ ನಲುಗಿ ಹೋಗಿದ್ದು, ಇದರ ಮಧ್ಯೆ ಕೂಡ ಅಲ್ಲಿನ ಯೋಧರು ದೇಶ ರಕ್ಷಣೆಯಲ್ಲಿ ಮಗ್ನರಾಗಿದ್ದಾರೆ.

Ukrainian soldier
Ukrainian soldier

By

Published : Feb 26, 2022, 3:03 PM IST

Updated : Feb 26, 2022, 3:11 PM IST

ಕೀವ್​(ಉಕ್ರೇನ್​):ರಷ್ಯಾ ಮಿಲಿಟರಿ ದಾಳಿಗೆ ಪುಟ್ಟ ದೇಶ ಉಕ್ರೇನ್​ ಇನ್ನಿಲ್ಲದ ಸಂಕಷ್ಟಕ್ಕೊಳಗಾಗಿದೆ. ಇದರ ಮಧ್ಯೆ ಕೂಡ ದಿಟ್ಟ ಹೋರಾಟ ಮುಂದುವರೆಸಿದೆ. ಉಕ್ರೇನ್​​ನ ಬಹುತೇಕ ನಗರಗಳ ಮೇಲೆ ರಷ್ಯಾ ಈಗಾಗಲೇ ದಾಳಿ ನಡೆಸಿದ್ದು, ಪರಿಣಾಮ ಈಗಾಗಲೇ ನೂರಾರು ಸೈನಿಕರು, ನಾಗರಿಕರು ಸಾವನ್ನಪ್ಪಿದ್ದಾರೆ. ಇದರ ಮಧ್ಯೆ ಉಕ್ರೇನ್​ ಯೋಧನೋರ್ವ ಸೇತುವೆಯೊಂದಿಗೆ ತನ್ನನ್ನು ಸ್ಫೋಟಿಸಿಕೊಳ್ಳುವ ಮೂಲಕ ರಷ್ಯಾ ಯುದ್ಧ ಟ್ಯಾಂಕರ್​ ಉಕ್ರೇನ್​​ನೊಳಗೆ ಬರುವುದನ್ನ ತಡೆದಿದ್ದಾರೆಂದು ವರದಿಯಾಗಿದೆ.

ರಷ್ಯಾದ ಯುದ್ಧ ಟ್ಯಾಂಕರ್​ಗಳು ಮುಂದೆ ಸಾಗಿ ಬರದಂತೆ ತಡೆಯುವ ಉದ್ದೇಶದಿಂದ ದಕ್ಷಿಣ ಪ್ರಾಂತ್ಯದ ಖರ್ಸನ್​​​ ಎಂಬಲ್ಲಿ ಯೋಧನೊಬ್ಬ ಸೇತುವೆಯೊಂದಿಗೆ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಆತನ ತ್ಯಾಗವನ್ನ ಉಕ್ರೇನ್​ ಮಿಲಿಟರಿ ಶ್ಲಾಘಿಸಿದೆ.

ಇದನ್ನೂ ಓದಿರಿ:ಉಕ್ರೇನ್‌ಗೆ ಫ್ರಾನ್ಸ್​ ಶಸ್ತ್ರಾಸ್ತ್ರ ಬಲ.. ಯುದ್ಧ ನಿಲ್ಲಿಸದಿರಲು ಅಧ್ಯಕ್ಷ ಝೆಲೆನ್ಸ್ಕಿ ಪಣ..

ಹೆನಿಚೆಸ್ಕ್​ ಸೇತುವೆ ಬಳಿ ಮೆರೈನ್​ ಬೆಟಾಲಿಯನ್​ ಇಂಜಿನಿಯರ್​ ವಿಟಲಿ ಸ್ಕಾಕುನ್​ ವೊಲೊಡಿಮಿರೊವ್ಚ್​​ ಎಂಬ ಯೋಧನ ನಿಯೋಜನೆ ಮಾಡಲಾಗಿತ್ತು. ರಷ್ಯಾ ಯುದ್ಧ ಟ್ಯಾಂಕರ್​​ಗಳು ಉಕ್ರೇನ್​​ನೊಳಗೆ ನುಗ್ಗಲು ಈ ಸೇತುವೆ ಮುಖ್ಯವಾಗಿದ್ದು, ಇದನ್ನ ಅರಿತ ಯೋಧ ಸೇತುವೆ ಜೊತೆಗೆ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಉಕ್ರೇನಿಯನ್ ಮಿಲಿಟರಿ ಫೇಸ್‌ಬುಕ್​ನಲ್ಲೂ ಮಾಹಿತಿ ಬಿತ್ತರಗೊಂಡಿದೆ.

ಕಳೆದ ಎರಡು ದಿನಗಳಿಂದ ಉಕ್ರೇನ್​ನ ವಿವಿಧ ನಗರಗಳ ಮೇಲೆ ರಷ್ಯಾ ಮಿಲಿಟರಿ ಪಡೆ ದಾಳಿ ನಡೆಸುತ್ತಿದ್ದು, ಇದರಿಂದ ಸಾವಿರಾರು ಜನರು ತೊಂದರೆಗೊಳಗಾಗಿದ್ದಾರೆ.

Last Updated : Feb 26, 2022, 3:11 PM IST

ABOUT THE AUTHOR

...view details