ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ವಶಪಡಿಸಿಕೊಳ್ಳಲು ದಾಳಿ ಮುಂದುವರೆಸಿವೆ. ಈ ಬೆನ್ನಲ್ಲೇ ಮಾಜಿ ಮಿಸ್ ಗ್ರ್ಯಾಂಡ್ ಉಕ್ರೇನ್ ಅನಸ್ತಾಸಿಯಾ ಲೆನ್ನಾ ಅವರು ರಷ್ಯಾದ ಆಕ್ರಮಣವನ್ನು ಕೆಚ್ಚೆದೆಯಿಂದ ಎದುರಿಸಲು ಉಕ್ರೇನಿಯನ್ ಮಿಲಿಟರಿ ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.
2015ರ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಶನಲ್ ಸೌಂದರ್ಯ ಸ್ಪರ್ಧೆಯಲ್ಲಿ ಲೆನ್ನಾ ಉಕ್ರೇನ್‌ನ ಪ್ರತಿನಿಧಿಯಾಗಿದ್ದರು. ಇನ್ಸ್ಸ್ಟಾಗ್ರಾಮ್ನಲ್ಲಿ 89.7 ಸಾವಿರ ಫಾಲೋವರ್ಸ್ ಹೊಂದಿರುವ ಇವರು, ರಷ್ಯಾದ ಆಕ್ರಮಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಸೈನಿಕರು ರಸ್ತೆಮಾರ್ಗವನ್ನು ತಡೆಯುತ್ತಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ಲೆನ್ನಾ, ಆಕ್ರಮಣ ಮಾಡುವ ಉದ್ದೇಶದಿಂದ ಉಕ್ರೇನಿಯನ್ ಗಡಿ ದಾಟಿದ ಪ್ರತಿಯೊಬ್ಬರೂ ಕೊಲ್ಲಲ್ಪಡುತ್ತಾರೆ ಎಂದು ಎಚ್ಚರಿಸಿದ್ದರು. ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿನ ಮತ್ತೊಂದು ಫೋಟೋ ಪೋಸ್ಟ್ ಮಾಡಿರುವ ಮಾಡೆಲ್, ಆಯುಧಗಳೊಂದಿಗೆ ಪೋಸ್ ಕೊಟ್ಟಿದ್ದಾರೆ.
ಇದಕ್ಕೂ ಮುನ್ನ ಉಕ್ರೇನ್ ಸಂಸತ್ ಸದಸ್ಯೆ ಕಿರಾ ರುಡಿಕ್ ಕೂಡ ಗನ್ ಹಿಡಿದಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಪುರುಷರಂತೆಯೇ ಮಹಿಳೆಯರು ಕೂಡ ನಮ್ಮ ತಾಯ್ನಾಡನ್ನು ರಕ್ಷಿಸುತ್ತಾರೆ. ನಾನೂ ಸಹ ಬಂದೂಕುಗಳನ್ನು ಬಳಕೆ ಕಲಿಯುತ್ತೇನೆ, ಶಸ್ತ್ರಾಸ್ತ್ರಗಳನ್ನು ಹೊರಲು ತಯಾರಿ ಮಾಡುತ್ತೇನೆ ಎಂದು ತಿಳಿಸಿದ್ದರು.