ಕರ್ನಾಟಕ

karnataka

ETV Bharat / international

ರಾಕೆಟ್​ ದಾಳಿಗೆ ಖ್ಯಾತ ಉಕ್ರೇನಿಯನ್​ ನಟಿ ಬಲಿ: ಮುಂದುವರಿದ ರಷ್ಯಾ ದಾಳಿ!

ರಷ್ಯಾ ಮತ್ತು ಉಕ್ರೇನ್​ ಮಧ್ಯೆ ನಡೆಯುತ್ತಿರುವ ಯುದ್ಧ 23ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಎರಡು ದೇಶಗಳ ನಡುವೆ ಮೊದಲಾದ ಯುದ್ಧ, ನಿಲ್ಲುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ. ಆದರೆ ರಷ್ಯಾ ಮಾತ್ರ ಉಕ್ರೇನ್​ ಮೇಲೆ ದಾಳಿ ಮುಂದುವರಿಸಿದ್ದು, ಅಮಾಯಕರ ಪ್ರಾಣ ಕಸಿದುಕೊಳ್ಳುತ್ತಿದೆ. ಇನ್ನು ರಷ್ಯಾ ನಡೆಸಿದ ರಾಕೆಟ್​ ದಾಳಿಗೆ ಖ್ಯಾತ ನಟಿಯೊಬ್ಬರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

Ukrainian actor killed in Russian rocket attack, Oksana Shvets killed in rocket attack, Ukrainian actor Oksana Shvets died, Ukrainian actor Oksana Shvets news, ರಷ್ಯಾದ ರಾಕೆಟ್ ದಾಳಿಯಲ್ಲಿ ಉಕ್ರೇನಿಯನ್ ನಟಿ ಸಾವು, ರಾಕೆಟ್ ದಾಳಿಯಲ್ಲಿ ಒಕ್ಸಾನಾ ಶ್ವೆಟ್ಸ್ ಮೃತ, ಉಕ್ರೇನಿಯನ್ ನಟಿ ಒಕ್ಸಾನಾ ಶ್ವೆಟ್ಸ್ ನಿಧನ, ಉಕ್ರೇನಿಯನ್ ನಟಿ ಒಕ್ಸಾನಾ ಶ್ವೆಟ್ಸ್ ಸುದ್ದಿ,
ಉಕ್ರೇನಿಯನ್ ನಟಿ ಒಕ್ಸಾನಾ ಶ್ವೆಟ್ಸ್ ಸಾವು

By

Published : Mar 18, 2022, 7:25 AM IST

ಕೀವ್ :ಉಕ್ರೇನ್​ ನಗರಗಳ ಮೇಲೆ ರಷ್ಯಾ ದಾಳಿ ಮುಂದುವರಿದಿದೆ. ನಗರದ ವಸತಿ ಕಟ್ಟಡದ ಮೇಲೆ ರಷ್ಯಾ ಸೈನಿಕರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಖ್ಯಾತ ನಟಿಯೊಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನಗರದ ವಸತಿ ಕಟ್ಟಡದ ಮೇಲೆ ರಷ್ಯಾ ಸೈನಿಕರು ನಡೆಸಿದ ರಾಕೆಟ್​ ಶೆಲ್​ ದಾಳಿಯಲ್ಲಿ ಖ್ಯಾತ ನಟಿ ಒಕ್ಸಾನಾ ಶ್ವೆಟ್ಸ್​ನ್ನು (67) ಕೊಂದಿದ್ದಾರೆ ಎಂದು ಯಂಗ್ ಥಿಯೇಟರ್ ತಂಡ ಹೇಳಿಕೆ ನೀಡಿದೆ. ಇನ್ನು ಒಕ್ಸಾನಾ ಶ್ವೆಟ್ಸ್​ಗೆ ಸ್ಥಳೀಯ ಸರ್ಕಾರ ಉಕ್ರೇನ್‌ನ ಅತ್ಯುನ್ನತ ಕಲಾತ್ಮಕ ಗೌರವಗಳಲ್ಲಿ ಒಂದಾದ 'ಉಕ್ರೇನ್‌ನ ಗೌರವಾನ್ವಿತ ಕಲಾವಿದೆ' ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಓದಿ:ಇದೆಂಥಾ ಬಿಸಿಲು.. ತೆಲಂಗಾಣದಲ್ಲಿ 43.5 ಡಿಗ್ರಿ ಸೆಲ್ಸಿಯಸ್‌ ತಾಪಮಾನಕ್ಕೆ ಜನ ತತ್ತರ; ದೇಶದಲ್ಲೇ ಇದು ಗರಿಷ್ಠ!!

ಫೆಬ್ರವರಿ 24 ರಂದು ಉಕ್ರೇನ್‌ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ವಿಶೇಷ ಕಾರ್ಯಾಚರಣೆಯು ಉಕ್ರೇನಿಯನ್ ಮಿಲಿಟರಿ ಮೂಲಸೌಕರ್ಯವನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

ಆದ್ರೆ ಯುಎನ್ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿಯ ಪ್ರಕಾರ, ಸಂಘರ್ಷದ ಆರಂಭದಿಂದಲೂ ಉಕ್ರೇನ್‌ನಲ್ಲಿ ಸುಮಾರು 600 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.

ಇನ್ನು ಉಭಯ ದೇಶಗಳ ನಡುವೆ ಯುದ್ಧ ಪ್ರಾರಂಭವಾಗಿ ಈಗಾಗಲೇ 23 ದಿನಗಳ ಕಳೆಯುತ್ತಿವೆ. ಆದರೆ ಯುದ್ಧ ನಿಲ್ಲುವ ಪ್ರಸಂಗವೇ ಕಾಣುತ್ತಿಲ್ಲ. ಮುಂದೆ ಈ ಯುದ್ಧ ಯಾವರೀತಿ ತಿರುವು ಪಡೆದುಕೊಳ್ಳುತ್ತದೆ ಎಂಬುದು ಕಾದುನೋಡ್ಬೇಕಾಗುತ್ತದೆ.

ABOUT THE AUTHOR

...view details