ಕರ್ನಾಟಕ

karnataka

ETV Bharat / international

Russia-Ukraine Conflict : ಯುದ್ಧದಲ್ಲೂ ಕಾರ್ಯನಿರ್ವಹಿಸುತ್ತಿವೆ ಉಕ್ರೇನ್​ನ ಬ್ಯಾಂಕ್​ಗಳು - ಉಕ್ರೇನ್ ಮೇಲೆ ರಷ್ಯಾ ಆಕ್ರಮಣ

ಯುದ್ಧದಲ್ಲೂ ಉಕ್ರೇನ್​ನಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ರಷ್ಯಾ ಆಕ್ರಮಣಕ್ಕೂ ಮೊದಲೇ ಸಿದ್ಧತೆ ಮಾಡಿಕೊಂಡ ಕಾರಣದಿಂದಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದು ಕೀವ್ ಇಂಡಿಪೆಂಡೆಂಟ್ ಹೇಳಿದೆ..

Ukraine's banking system still functional despite military operations
Russia-Ukraine Conflict: ಯುದ್ಧದಲ್ಲೂ ಕಾರ್ಯನಿರ್ವಹಿಸುತ್ತಿವೆ ಉಕ್ರೇನ್​ನ ಬ್ಯಾಂಕ್​ಗಳು

By

Published : Mar 12, 2022, 7:43 AM IST

ಕೀವ್, ಉಕ್ರೇನ್ :ರಷ್ಯಾ ಆಕ್ರಮಣದಿಂದಾಗಿ ಉಕ್ರೇನ್​ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಲಕ್ಷಾಂತರ ಮಂದಿ ಉಕ್ರೇನ್​ನಿಂದ ಹೊರನಡೆದಿದ್ದಾರೆ. ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಬಾಂಬ್, ಮಿಸೈಲ್, ಶೆಲ್ ದಾಳಿಗಳು ಆಗಾಗ ಸಂಭವಿಸುತ್ತಿರುತ್ತವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಣೆ ಮಾಡುತ್ತಿವೆ.

ಕೀವ್​ ಇಂಡಿಪೆಂಡೆಂಟ್ ಎಂಬ ಸುದ್ದಿಸಂಸ್ಥೆ ಈ ಕುರಿತು ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದು, ರಾಷ್ಟ್ರೀಯ ಬ್ಯಾಂಕ್​ ಆದ ನ್ಯಾಷನಲ್ ಬ್ಯಾಂಕ್ ಆಫ್ ಉಕ್ರೇನ್ (ಎನ್​ಬಿಯು) ಇಂತಹ ಯುದ್ಧದ ಪರಿಸ್ಥಿತಿಯ ಹೊರತಾಗಿಯೂ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂದು ಉಲ್ಲೇಖಿಸಿದೆ.

ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗೆ ಮುಂಚಿತವಾಗಿ ಉಕ್ರೇನಿಯನ್ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಇದರಿಂದಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದೆ ಎಂದು ಕೀವ್ ಇಂಡಿಪೆಂಡೆಂಟ್ ಹೇಳಿದೆ.

ಇದನ್ನೂ ಓದಿ:ಉಕ್ರೇನ್​ನಲ್ಲಿ ಜೈವಿಕ ಅಸ್ತ್ರಗಳನ್ನು ಉತ್ಪಾದಿಸುತ್ತಿದ್ದು, ಪುರಾವೆಗಳನ್ನು ನಾಶಪಡಿಸಿದೆ : ರಷ್ಯಾ

ಮತ್ತೊಂದೆಡೆ ಪೋಲೆಂಡ್​​ನ ವಾರ್ಸಾ ಮತ್ತು ಕ್ರಾಕೋವ್ ನಗರಗಳು ಸಾಕಷ್ಟು ಉಕ್ರೇನ್​ ನಿರಾಶ್ರಿತರಿಗೆ ಆಹ್ವಾನ ನೀಡಿದ್ದು, ಮತ್ತಷ್ಟು ನಿರಾಶ್ರಿತರಿಗೆ ಆಶ್ರಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದು, ಉಕ್ರೇನ್​ ಸರ್ಕಾರ ಈ ವಿಚಾರವಾಗಿ ಚಿಂತನೆ ನಡೆಸುತ್ತಿದೆ. ಈಗಾಗಲೇ ಎರಡು ವಾರಗಳ ಅವಧಿಯಲ್ಲಿ 1 ಲಕ್ಷ ಉಕ್ರೇನಿಯನ್ನರು ಕ್ರಾಕೋವ್​​ಗೆ ಮತ್ತು 2 ಲಕ್ಷ ಮಂದಿ ವಾರ್ಸಾಗೆ ಆಗಮಿಸಿದ್ದಾರೆ.

ABOUT THE AUTHOR

...view details