ಕರ್ನಾಟಕ

karnataka

ETV Bharat / international

ನಾನು ಕೀವ್​ನಲ್ಲಿಯೇ ಇದ್ದೇನೆ, ಪಲಾಯನ ಮಾಡಿಲ್ಲ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ - ಉಕ್ರೇನ್ ಮೇಲೆ ರಷ್ಯಾ ಆಕ್ರಮಣ

ಕೆಲವು ದಿನಗಳ ಹಿಂದೆ ರಷ್ಯಾದ ರಾಜಕಾರಣಿ ವ್ಯಾಚೆಸ್ಲಾವ್ ವೊಲೊಡಿನ್ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಅಧ್ಯಕ್ಷ ನಾನು ಎಲ್ಲಿಯೂ ಪಲಾಯನ ಮಾಡಿಲ್ಲ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ukraine president Zelensky shows Kyiv office in video
ನಾನು ಕೀವ್​ನಲ್ಲಿಯೇ ಇದ್ದೇನೆ, ಪಲಾಯನ ಮಾಡಿಲ್ಲ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

By

Published : Mar 5, 2022, 1:08 PM IST

ಕೀವ್, ಉಕ್ರೇನ್:ರಷ್ಯಾ ದಾಳಿಗೆ ಉಕ್ರೇನ್ ಪರಿಣಾಮಕಾರಿಯಾಗಿ ಪ್ರತಿಕ್ರಿಯೆ ನೀಡುತ್ತಿದೆ. ಈ ಬೆನ್ನಲ್ಲೇ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪೋಲೆಂಡ್​ಗೆ ಪಲಾಯನ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಝೆಲೆನ್ಸ್ಕಿ 'ನಾನು ಎಲ್ಲಿಯೂ ಪಲಾಯನ ಮಾಡಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಇನ್​​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಶನಿವಾರ ಪೋಸ್ಟ್ ಮಾಡಿದ್ದು, 'ನಾನು ಕೀವ್​ನಲ್ಲಿಯೇ ಇದ್ದೇನೆ. ನಾನು ಇಲ್ಲಿಂದಲೇ ಕೆಲಸ ಮಾಡುತ್ತಿದ್ದೇನೆ. ಯಾರೂ ಕೂಡಾ ಪಲಾಯನ ಮಾಡಿಲ್ಲ' ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಝೆಲೆನ್ಸ್ಕಿ ತಮ್ಮ ಕಚೇರಿಯಲ್ಲಿರುವುದು ಗೊತ್ತಾಗುತ್ತದೆ. ಅವರ ಜೊತೆಗೆ ಮತ್ತೊಬ್ಬ ಅಧಿಕಾರಿ ಕೂಡಾ ಇದ್ದಾರೆ.

ಕೆಲವು ದಿನಗಳ ಹಿಂದೆ ರಷ್ಯಾದ ರಾಜಕಾರಣಿ ವ್ಯಾಚೆಸ್ಲಾವ್ ವೊಲೊಡಿನ್ ಅವರು ಝೆಲೆನ್ಸ್ಕಿ ಪೋಲೆಂಡ್‌ಗೆ ಪಲಾಯನ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು. ರಷ್ಯಾ ದಾಳಿಯ ಕುರಿತು ಉಕ್ರೇನ್ ಸಂಸತ್ತು ಸಭೆ ನಡೆಸುವ ಮೊದಲು ಅವರು ಮಾರ್ಚ್​ 2ರಂದು ಉಕ್ರೇನ್​ ತೊರೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಸೋಷಿಯಲ್ ಮೀಡಿಯಾಗಳಲ್ಲಿ ಕೂಡಾ ಇದೇ ರೀತಿಯಾಗಿ ಚರ್ಚೆಗಳಾಗಿತ್ತು.

ಇದನ್ನೂ ಓದಿ:ಉಕ್ರೇನ್ - ರಷ್ಯಾ ಯುದ್ಧಕ್ಕೆ ಅಲ್ಪವಿರಾಮ: ಜಸ್ಟ್​ 5.5 ಗಂಟೆಗಳ ಕದನ ವಿರಾಮ ಘೋಷಣೆ

ಉಕ್ರೇನ್​ನಲ್ಲಿಯೇ ಝೆಲೆನ್ಸ್ಕಿ ಇದ್ದಾರೆಂದು ಹೇಳಲಾಗುತ್ತಿದ್ದು, ಅವರು ಎಲ್ಲಿದ್ದಾರೆಂಬ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿದೆ. ಮಾಧ್ಯಮಗಳ ಪ್ರಕಾರ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಅಧ್ಯಕ್ಷರನ್ನು ಕೊಲ್ಲಲು ವ್ಯಾಗ್ನರ್ ಮತ್ತು ಚೆಚೆನ್ ಎಂಬ ಎರಡು ವಿಶೇಷ ಪಡೆಗಳನ್ನು ಉಕ್ರೇನ್​ಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details