ಕೀವ್(ಉಕ್ರೇನ್) :ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆಯುತ್ತಿದೆ. ಶಾಂತಿ ಮಾತುಕತೆಗಾಗಿ ಬೆಲಾರಸ್ ರಾಷ್ಟ್ರಕ್ಕೆ ತಮ್ಮ ನಿಯೋಗವನ್ನು ಕಳುಹಿಸಿದೆ. ಆದರೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬೆಲಾರಸ್ನಲ್ಲಿ ಶಾಂತಿ ಮಾತುಕತೆಯನ್ನು ತಳ್ಳಿ ಹಾಕಿದ್ದಾರೆ.
ರಷ್ಯಾ ಬೆಲಾರಸ್‌ಗೆ ತನ್ನ ನಿಯೋಗವನ್ನು ಕಳುಹಿಸಿ, ಅಲ್ಲಿನ ಗೋಮೆಲ್ ನಗರದಲ್ಲಿ ಉಕ್ರೇನ್‌ನೊಂದಿಗೆ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಹೇಳಿದೆ. ಈ ಪ್ರಸ್ತಾಪವನ್ನು ತಿರಸ್ಕರಿಸಿರುವ ಝೆಲೆನ್ಸ್ಕಿ, ತನ್ನ ದೇಶದ ಕಡೆಗೆ ಆಕ್ರಮಣಶೀಲತೆಯನ್ನು ತೋರಿಸದ ಸ್ಥಳಗಳಲ್ಲಿ ಮಾತ್ರ ಮಾತುಕತೆಗೆ ಮುಕ್ತವಾಗಿದೆ ಎಂದು ಹೇಳಿದ್ದಾರೆ. ಏಕೆಂದರೆ, ಬೆಲಾರಸ್‌ನಿಂದ ಉಕ್ರೇನ್‌ನ ಮೇಲೆ ರಷ್ಯಾ ತನ್ನ ಕೆಲವು ದಾಳಿಗಳನ್ನು ನಡೆಸುತ್ತಿದೆ.