ಕೀವ್(ಉಕ್ರೇನ್): ತನ್ನ ಮೇಲೆ ಭೀಕರ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾ ವಿರುದ್ಧ ಉಕ್ರೇನ್ ಕಳೆದ ಆರು ದಿನಗಳಿಂದ ಕೆಚ್ಚೆದೆಯಿಂದ ಹೋರಾಡುತ್ತಿದ್ದು, ಇಲ್ಲಿಯವರೆಗೆ ತೀವ್ರ ಪೈಪೋಟಿ ನೀಡುತ್ತಾ ಬಂದಿದೆ. ಮೇಲಿಂದ ಮೇಲೆ ಅಲ್ಲಿನ ಯೋಧರು, ನಾಗರಿಕರಿಗೆ ಧೈರ್ಯ ತುಂಬುತ್ತಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇಂದು ಯುರೋಪಿಯನ್ ಪಾರ್ಲಿಮೆಂಟ್ನಲ್ಲಿ ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಭಾಷಣ ಮಾಡಿದರು.
ಉಕ್ರೇನ್ ಅಧ್ಯಕ್ಷರ ಮಾತಿಗೆ ಯುರೋಪಿಯನ್ ಸಂಸತ್ನಲ್ಲಿ ಎದ್ದು ನಿಂತು ಬೆಂಬಲ ಸೂಚಿಸಿದ ಸಂಸತ್ ಸದಸ್ಯರು ನಾವು ಯುರೋಪಿಯನ್ ಪಾರ್ಲಿಮೆಂಟ್ನಲ್ಲಿ ಸಾಮಾನ್ಯ ಸದಸ್ಯರಾಗಲು ಹೋರಾಟ ಮುಂದುವರೆಸಿದ್ದು, ಯುರೋಪಿಯನ್ ಒಕ್ಕೂಟ ಇಲ್ಲದಿದ್ದರೆ ಉಕ್ರೇನ್ ಏಕಾಂಗಿಯಾಗಲಿದೆ. ನೀವು ನಮ್ಮೊಂದಿಗಿದ್ದೀರಿ ಎಂಬ ಭರವಸೆ ಇದೆ ಎಂದಿದ್ದಾರೆ. ಇವರ ಭಾಷಣ ಕೇಳಿದ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿದರು.
ನಮ್ಮ ಭೂಮಿ ಮತ್ತು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ ಎಂದಿರುವ ವೊಲೊಡಿಮಿರ್, ನಮ್ಮ ಎಲ್ಲ ನಗರಗಳ ಮೇಲೆ ರಷ್ಯಾ ದಾಳಿ ನಡೆಸಿದ್ದು, ನಮ್ಮನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾವು ಬಲಶಾಲಿಯಾಗಿದ್ದೇವೆ ಎಂದರು. ಇದೇ ವೇಳೆ ರಷ್ಯಾ ನಡೆಸುತ್ತಿರುವ ಶೆಲ್ ದಾಳಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಇದೊಂದು ಯುದ್ಧ ಅಪರಾಧ ಎಂದಿದ್ದಾರೆ. ಈವರೆಗೆ ಏಕಾಂಗಿಯಾಗಿದ್ದೇವೆಂದು ಅಂದುಕೊಂಡಿದ್ದೆವು. ಉಕ್ರೇನ್ಗೆ ಯುಇ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಯುಇ ಪಾರ್ಲಿಮೆಂಟ್ನಲ್ಲಿ ಉಕ್ರೇನ್ ಅಧ್ಯಕ್ಷ ಭಾಷಣ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳಿಂದ ನಾವು ತೆಗೆದುಕೊಂಡಿರುವ ಉಕ್ರೇನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಹೇಳಿಕೊಂಡಿದ್ದಾರೆ.