ಕರ್ನಾಟಕ

karnataka

ETV Bharat / international

ಮಾತುಕತೆಗೂ ಮುನ್ನ ಬಾಂಬ್​ ಹಾಕೋದನ್ನು ನಿಲ್ಲಿಸಿ.. ರಷ್ಯಾಗೆ ಉಕ್ರೇನ್​ ಅಧ್ಯಕ್ಷರ ತಾಕೀತು - ರಷ್ಯಾಗೆ ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ ಪಂಚ್​

ರಷ್ಯಾ ಮತ್ತು ಉಕ್ರೇನ್​ ಮಧ್ಯೆ ಇಂದು ಎರಡನೇ ಸುತ್ತಿನ ಸಂಧಾನ ಸಭೆ ನಡೆಯಲಿದ್ದು, ಅದಕ್ಕೂ ಮೊದಲು ರಷ್ಯಾ ತನ್ನ ದೇಶದ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ಸ್ಕಿ ಒತ್ತಾಯಿಸಿದ್ದಾರೆ.

ukraine-president
ಉಕ್ರೇನ್​ ಅಧ್ಯಕ್ಷ

By

Published : Mar 2, 2022, 10:48 AM IST

ಕೀವ್​: ರಷ್ಯಾ ಮತ್ತು ಉಕ್ರೇನ್​ ಮಧ್ಯೆ ಇಂದು ಎರಡನೇ ಸುತ್ತಿನ ಸಂಧಾನ ಸಭೆ ನಡೆಯಲಿದ್ದು, ಅದಕ್ಕೂ ಮೊದಲು ರಷ್ಯಾ ತನ್ನ ದೇಶದ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ಸ್ಕಿ ಒತ್ತಾಯಿಸಿದ್ದಾರೆ.

ಭಾರೀ ಭದ್ರತೆಯಿರುವ ಸರ್ಕಾರಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಷ್ಯಾದ ವಾಯುಪಡೆಗಳು ಉಕ್ರೇನ್​ ಮೇಲೆ ದಾಳಿ ಮಾಡುವುದನ್ನು ತಡೆಯಲು ನ್ಯಾಟೋ ರಾಷ್ಟ್ರಗಳು ತಮ್ಮ ದೇಶದ ಮೇಲೆ ರಷ್ಯಾ ವಿಮಾನಗಳ ಹಾರಾಟವನ್ನು ನಿಷೇಧಿಸಬೇಕು. ಇದು ಆ ರಾಷ್ಟ್ರಗಳನ್ನು ರಷ್ಯಾದ ಜೊತೆಗಿನ ತಮ್ಮ ಯುದ್ಧದಲ್ಲಿ ಎಳೆದು ತರುವ ಉದ್ದೇಶವಲ್ಲ ಎಂದು ಹೇಳಿದ್ದಾರೆ.

ರಾಜಧಾನಿಯನ್ನು ರಷ್ಯಾ ಪಡೆಗಳು ಸುತ್ತುವರೆದಿದ್ದು ಕೀವ್ ತೊರೆಯುವ ಪ್ರಸ್ತಾಪವನ್ನು ನಿರಾಕರಿಸಿದ ಝೆಲೆನ್​ಸ್ಕಿ, ಒಂದು ವೇಳೆ ಉಕ್ರೇನ್​ಗೆ ನ್ಯಾಟೋ ಸದಸ್ಯತ್ವ ನೀಡಲಾಗದಿದ್ದರೆ ನಮ್ಮ ಗಡಿ ಭದ್ರತೆಯ ಬಗ್ಗೆ ಕಾನೂನುಬದ್ಧ ಖಾತರಿಯನ್ನು ನೀಡಬೇಕು ಎಂದು ಕೋರಿದ್ದಾರೆ.

ಮಾತುಕತೆಗೂ ಮೊದಲು ಯುದ್ಧ ನಿಲ್ಲಿಸಿ:ರಷ್ಯಾದ ಜೊತೆಗೆ ಮಾತುಕತೆಗೆ ಮುಂದಾಗಲು ಷರತ್ತುಗಳನ್ನು ವಿಧಿಸಿದ ಉಕ್ರೇನ್​ ಅಧ್ಯಕ್ಷ, ಸಂಧಾನಕ್ಕೂ ಮುನ್ನ ರಷ್ಯಾ ದಾಳಿಯನ್ನು ನಿಲ್ಲಿಸಬೇಕು. ಒಂದೆಡೆ ದಾಳಿ ನಡೆಸುತ್ತಾ, ಇನ್ನೊಂದೆಡೆ ಶಾಂತಿ ಮಾತುಕತೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಯುದ್ಧ ನಿಲ್ಲಿಸಿ ಮಾತುಕತೆಗೆ ಬನ್ನಿ ಎಂದು ಖಡಕ್​ ಆಗಿ ಹೇಳಿದ್ದಾರೆ.

ನ್ಯಾಟೋಗೆ ಸೇರಿಸಿಕೊಳ್ಳಿ, ಇಲ್ಲ ಖಾತರಿ ನೀಡಿ:ರಷ್ಯಾದ ದಾಳಿಯನ್ನು ತಡೆಯಬೇಕಾದರೆ ತಮಗೆ ಮೊದಲು ನ್ಯಾಟೋ ಸದಸ್ಯ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ನಮ್ಮ ದೇಶದ ಭದ್ರತೆಯ ಬಗ್ಗೆ ಕಾನೂನುಬದ್ಧ ಖಾತ್ರಿಯನ್ನು ನೀಡಬೇಕು ಎಂದು ಝೆಲನ್​ಸ್ಕಿ ಬಲವಾಗಿ ವಾದ ಮಂಡಿಸಿದ್ದಾರೆ.

ರಷ್ಯಾದ ಯುದ್ಧದಾಹವನ್ನು ತಡೆಯಬೇಕಾದರೆ ನ್ಯಾಟೋ ರಾಷ್ಟ್ರಗಳು ಆ ದೇಶದ ವಿಮಾನಗಳು ನಿಮ್ಮ ವಾಯುಪ್ರದೇಶದಲ್ಲಿ ಹಾರಾಟ ನಡೆಸದಂತೆ ಸಂಪೂರ್ಣ ನಿರ್ಬಂಧಿಸಬೇಕು. ಅಲ್ಲದೇ ತನಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಬೇಕು. ತಮ್ಮ ಈ ಕೋರಿಕೆ ಇತರ ರಾಷ್ಟ್ರಗಳನ್ನು ಈ ಯುದ್ಧದಲ್ಲಿ ಭಾಗಿವಹಿಸುವಿಕೆಯನ್ನು ಪ್ರಸ್ತಾಪಿಸುವುದಿಲ್ಲ. ಬದಲಾಗಿ ನಮ್ಮ ರಾಷ್ಟ್ರ ರಕ್ಷಣೆಗೆ ನೆರವು ಯಾಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಕೊನೆಯವರೆಗೂ ಹೋರಾಟ:ಯುದ್ಧಭೂಮಿಯಲ್ಲಿ ಏಕಾಂಗಿಯಾಗಿರುವ ಉಕ್ರೇನ್​ ಅಧ್ಯಕ್ಷ ನಮ್ಮ ರಾಷ್ಟ್ರ, ಗಡಿ ರಕ್ಷಣೆಗಾಗಿ ಕೊನೆಯವರೆಗೂ ಹೋರಾಟ ನಡೆಸುತ್ತೇವೆ. ಇದು ನಮ್ಮ ಮುಂದಿನ ಪೀಳಿಗೆಗಾಗಿ ನಾವು ಮಾಡುತ್ತಿರುವ ವಿರೋಧ. ರಷ್ಯಾ ನಮ್ಮ ಮೇಲೆ ದಾಳಿ ಮಾಡಿ ನಾಶಪಡಿಸುವುದೇ ಅದರ ಮುಖ್ಯ ಧ್ಯೇಯವಾಗಿದೆ. ಈ ದೇಶದ ಮೇಲೆ ಅವರಿಗೆ ಯಾವ ಅಧಿಕಾರವೂ ಇಲ್ಲ ಎಂದು ಗುಡುಗಿದ್ದಾರೆ.

ಒಂದು ವೇಳೆ ಉಕ್ರೇನ್​ ಈ ಯುದ್ಧದಲ್ಲಿ ಪತನವಾದರೆ, ಇಲ್ಲಿ ನಿಮ್ಮ ಸಾರ್ವಭೌಮತ್ವ ಸಾಧಿಸಿದರೆ, ಉಳಿದ ದೇಶಗಳು(ನ್ಯಾಟೋ ಸದಸ್ಯ) ಕೂಡ ನಿಮ್ಮ ಸುತ್ತಮುತ್ತಲೇ ಇರುತ್ತವೆ. ಆ ದೇಶಗಳಿಂದಲೂ ಇದೇ ರೀತಿಯ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ರಷ್ಯಾವನ್ನು ಎಚ್ಚರಿಸಿದ್ದಾರೆ.

ಓದಿ:ಉಕ್ರೇನ್ ಮೇಲಿನ ದಾಳಿಗೆ ರಷ್ಯಾ ಬೆಲೆ ತೆರುವಂತೆ ಮಾಡ್ತೇವಿ: ಜೋ ಬೈಡನ್ ಪ್ರತಿಜ್ಞೆ

For All Latest Updates

ABOUT THE AUTHOR

...view details