ಕೀವ್(ಉಕ್ರೇನ್):ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಯುದ್ಧ ಘೋಷಿಸುತ್ತಿದ್ದಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ಉಕ್ರೇನ್ ಜನರಲ್ಲಿ ಧೈರ್ಯ ತುಂಬುತ್ತಿದ್ದಾರೆ.
ನಾಗರಿಕರು ಭಯ ಪಡಬಾರದು, ಶಾಂತಿಯಿಂದ ಇರಬೇಕು ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿದ್ದು, ರಷ್ಯಾ ತನ್ನ ದೇಶದ ಮಿಲಿಟರಿ ಪಡೆಗಳು ಉಕ್ರೇನ್ ದೇಶದ ಗಡಿಯಲ್ಲಿನ ಸೈನಿಕರ ಮೇಲೆ ದಾಳಿ ನಡೆಸಿದೆ. ಯಾವುದೇ ಕಾರಣಕ್ಕೂ ಗಾಬರಿಯಾಗಬೇಡಿ. ನಾವು ಬಲಿಷ್ಠರಾಗಿದ್ದು, ಗೆಲುವು ನಮಗೇ ದೊರಕಲಿದೆ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯನ್ ಭಾಷೆಯಲ್ಲಿ ಉಕ್ರೇನಿಯನ್ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ರಷ್ಯಾವನ್ನು ಎದುರಿಸಲು ನಾವು ಕೆಲಸ ಮಾಡುತ್ತಿದ್ದೇವೆ. ನಾವು ಬಲಿಷ್ಠರಾಗಿದ್ದೇವೆ. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ. ಎಲ್ಲರನ್ನೂ ಸೋಲಿಸುತ್ತೇವೆ. ಏಕೆಂದರೆ ನಾವು 'ಉಕ್ರೇನ್' ಆಗಿದ್ದೇವೆ ಎಂದಿದ್ದಾರೆ.