ಕರ್ನಾಟಕ

karnataka

ETV Bharat / international

ರಷ್ಯಾ ದಾಳಿಗೆ ಉಕ್ರೇನ್​ನ 902 ನಾಗರಿಕರು ಬಲಿ: ವಿಶ್ವಸಂಸ್ಥೆ - ಯುದ್ಧದಲ್ಲಿ ನಾಗರಿಕರ ಬಲಿ

Civilians killed Russia-Ukraine war conflict: ರಷ್ಯಾ ನಿರಂತರ ದಾಳಿಗೆ ಉಕ್ರೇನ್​ ನಾಮರೂಪಗೊಂಡಿದ್ದು, ಇಲ್ಲಿಯವರೆಗೂ 902 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

killed
ವಿಶ್ವಸಂಸ್ಥೆ

By

Published : Mar 20, 2022, 10:56 PM IST

ಕೀವ್​:ಉಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿ ಇಂದಿಗೆ 25 ದಿನಗಳಾಗಿವೆ. ಶೆಲ್​, ಬಾಂಬ್​ ದಾಳಿಯನ್ನು ರಷ್ಯಾ ನಿರಂತರವಾಗಿ ಮುಂದುವರಿಸಿದೆ. ಇದರಿಂದ ಉಕ್ರೇನ್​ ಭಾಗಶಃ ಧ್ವಂಸವಾಗಿದೆ.

ರಷ್ಯಾದ ರಕ್ಕಸ ದಾಳಿಗೆ ಈವರೆಗೆ ಕನಿಷ್ಠ 902 ನಾಗರಿಕರು ಸಾವನ್ನಪ್ಪಿ, 1459 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್​ ಕಚೇರಿ ಅಂದಾಜಿಸಿದೆ.

ಆದರೆ, ನಿಜಕ್ಕೂ ಈ ಸಾವಿನ ಸಂಖ್ಯೆ ಇದಕ್ಕಿಂತಲೂ ದುಪ್ಪಟ್ಟಾಗಿರಲಿದೆ ಎಂದು ಹೇಳಲಾಗುತ್ತಿದೆ. ಉಕ್ರೇನ್​ನ ಇಂಡಿಪೆಂಡೆಂಟ್​ ಸಂಸ್ಥೆಯ ಪ್ರಕಾರ ರಷ್ಯಾದ ಭೀಕರ ದಾಳಿಗೆ ತುತ್ತಾಗಿ ಛಿದ್ರವಾಗಿರುವ ಮರಿಯುಪೋಲ್​ ನಗರವೊಂದರಲ್ಲೇ 2400 ನಾಗರಿಕರು ಸಾವನ್ನಪ್ಪಿದ್ದಾರೆ.

ಇಡೀ ದೇಶದಲ್ಲಿ ಸಾವಿನ ಸಂಖ್ಯೆ ಇದಕ್ಕೂ ಹೆಚ್ಚಿದೆ ಎಂದು ಹೇಳಿದೆ. ಈ ಮಧ್ಯೆ ರಷ್ಯಾ ದಾಳಿಯಿಂದ ತಪ್ಪಿಸಿಕೊಳ್ಳಲು ಉಕ್ರೇನ್​ನಿಂದ 1 ಕೋಟಿಗೂ ಅಧಿಕ ಜನರು ದೇಶ ತೊರೆದಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಓದಿ:ಭಾರತದ ವಿದೇಶಾಂಗ ನೀತಿಯನ್ನು ಹಾಡಿ ಹೊಗಳಿದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್!​

ABOUT THE AUTHOR

...view details