ಲಂಡನ್ (ಯು.ಕೆ ):ಭಾರತದಿಂದ ಸುಮಾರು ಮೂರು ಮಿಲಿಯನ್ ಯುನಿಟ್ ಪ್ಯಾರಸಿಟಮಲ್ ಔಷಧವನ್ನು ಆಮದು ಮಾಡಿಕೊಳ್ಳುವುದಾಗಿ ಬ್ರಿಟನ್ ವಿದೇಶಾಂಗ ಕಚೇರಿ ತಿಳಿಸಿದೆ.
ಭಾರತದಿಂದ 3 ಮಿಲಿಯನ್ ಯುನಿಟ್ ಪ್ಯಾರಸಿಟಮಲ್ ಆಮದು ಮಾಡಿಕೊಳ್ಳಲು ಮುಂದಾದ ಬ್ರಿಟನ್ - ಭಾರತದಿಂದ ಯುಕೆಗೆ ಪ್ಯಾರಸಿಟಮಲ್ ರಫ್ತು
ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಿದ ಬಳಿಕ ಸುಮಾರು 3 ಮಿಲಿಯನ್ ಯುನಿಟ್ ಪ್ಯಾರಸಿಟಮಲ್ ಆಮದು ಮಾಡಿಕೊಳ್ಳಲು ಬ್ರಿಟನ್ ಮುಂದಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬ್ರಿಟನ್ ಸರ್ಕಾರದ ವಿದೇಶಾಂಗ ಮತ್ತು ಕಾಮನ್ವೆಲ್ತ್ ಕಚೇರಿ, ಭಾರತದೊಂದಿಗೆ ಮಾತುಕತೆ ನಡೆಸಿದ ಬಳಿಕ ಸುಮಾರು 3 ಮಿಲಿಯನ್ ಯುನಿಟ್ ಪ್ಯಾರಾಸಿಟಮಲ್ ಅನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಮುಂದಿನ ಎರಡರಿಂದ ಮೂರು ವಾರಗಳಲ್ಲಿ ಅದು ತಲುಪಲಿದೆ. ಆಮದು ಮಾಡಿಕೊಂಡ ಔಷಧವನ್ನು ಪ್ರಮುಖ ಸೂಪರ್ ಮಾರ್ಕೆಟ್ ಒಂದರಲ್ಲಿ ಸಂಗ್ರಹಿಸಿಡಲಾಗುವುದು ಎಂದಿದೆ.
ಕೊರೊನಾ ವೈರಸ್ನಿಂದ ಹೆಚ್ಚು ಸಮಸ್ಯೆಗೊಳಗಾದ ರಾಷ್ಟ್ರಗಳಿಗೆ ಪ್ಯಾರಸಿಟಮಲ್ ಮತ್ತು ಹೈಡ್ರೋಕ್ಲೋರೋಕಿನ್ ರಫ್ತು ಮಾಡಲು ಈ ತಿಂಗಳ ಆರಂಭದಲ್ಲಿ ಭಾರತ ಅನುಮತಿ ನೀಡಿತ್ತು. ಸದ್ಯ ಬ್ರಿಟನ್ನಲ್ಲಿ 90 ಸಾವಿರಕ್ಕೂ ಹೆ್ಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ.