ಲಂಡನ್: ಕೋವಿಡ್ ಸೋಂಕು ನಿಯಂತ್ರಣಕ್ಕೆ ಕಂಡು ಹಿಡಿದಿರುವ ಮಾಡೆರ್ನಾದ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಯುಕೆ ಅನುಮೋದಿಸಿದೆ.
ಮಾಡೆರ್ನಾ ಲಸಿಕೆ ಬಳಕೆಗೆ ಅನುಮತಿ ನೀಡಿದ ಯುನೈಟೆಡ್ ಕಿಂಗ್ಡಮ್ - ಯುಕೆಯಲ್ಲಿ ಮೊಡೆರ್ನಾದ ವೈರಸ್ ಲಸಿಕೆ
ಹಲವಾರು ಜನರನ್ನೊಳಗೊಂಡ ಕಠಿಣ ಕ್ಲಿನಿಕಲ್ ಪ್ರಯೋಗಗಳ ನಂತರ ಎಂಹೆಚ್ಆರ್ಎ ಮಾಡೆರ್ನಾ ಲಸಿಕೆಯನ್ನು ಅಧಿಕೃತಗೊಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೊಡೆರ್ನಾ ಲಸಿಕೆ ಬಳಕೆಗೆ ಅನುಮತಿ ನೀಡಿದ ಯುಕೆ
ದೇಶವು ಇತ್ತೀಚೆಗೆ ರೂಪಾಂತರಿ ಕೊರೊನಾ ಸಾಂಕ್ರಾಮಿಕದ ಪರಿಣಾಮವನ್ನು ಹೆಚ್ಚಾಗಿ ಎದುರಿಸುತ್ತಿದ್ದು, ಮೂರನೇ ಲಾಕ್ಡೌನ್ಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಪರಿಣಾಮಕಾರಿಯಾಗಿ ಬಳಕೆಯಾಗಲಿದೆ.
ಈ ಮೊದಲು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ವಿಶ್ವವಿದ್ಯಾಲಯದ ಲಸಿಕೆಗೆ ಅನುಮೋದನೆ ನೀಡಿದ ನಂತರ ಮೂರನೆಯ ಲಸಿಕೆಯಾಗಿ ಮಾಡೆರ್ನಾಗೆ ಅನುಮತಿ ನೀಡಲಾಗಿದೆ.