ಲಂಡನ್ :ಬ್ರಿಟನ್‌ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತ ಸಾಗುತ್ತಿದೆ. ಗುರುವಾರ 22,915 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 1,453,256ಕ್ಕೆ ಏರಿಕೆಯಾಗಿದೆ.
ಬ್ರಿಟನ್‌ನಲ್ಲಿ ಮತ್ತೆ ಕೊರೊನಾ ಅಲೆ: 22,915 ಜನರಿಗೆ ಪಾಸಿಟಿವ್, 501 ಮಂದಿ ಬಲಿ - ಕೊರೊನಾ ವೈರಸ್ ಪ್ರಕರಣ
ಯುಕೆಯಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತ ಸಾಗುತ್ತಿದೆ. ಹೊಸದಾಗಿ 22,915 ಜನರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ.
![ಬ್ರಿಟನ್‌ನಲ್ಲಿ ಮತ್ತೆ ಕೊರೊನಾ ಅಲೆ: 22,915 ಜನರಿಗೆ ಪಾಸಿಟಿವ್, 501 ಮಂದಿ ಬಲಿ uk-records-another-22915-coronavirus-cases-with-501-deaths](https://etvbharatimages.akamaized.net/etvbharat/prod-images/768-512-9599161-thumbnail-3x2-news.jpg)
ಬ್ರಿಟನ್‌ನಲ್ಲಿ ಮತ್ತೆ ಕೊರೊನಾ ಅಲೆ
ಅಲ್ಲದೆ ವೈರಸ್ನಿಂದ 501 ಜನರು ಸಾವಿಗೀಡಾಗಿದ್ದು, ಒಟ್ಟೂ ಸಾವಿನ ಸಂಖ್ಯೆ 53,775ಕ್ಕೆ ತಲುಪಿದೆ ಎಂದು ಡೇಟಾ ತೋರಿಸಿದೆ. ಪ್ರಕರಣಗಳು ಜಾಸ್ತಿಯಾಗಲು ಸೂಪರ್‌ಮಾರ್ಕೆಟ್‌ಗಳು ಪ್ರಮುಖ ಕಾರಣವಾಗಿದೆ ಎಂಬುದು ಇಂಗ್ಲೆಂಡ್ ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ.
ದೇಶದಲ್ಲಿ ಡಿ. 2ರವರೆಗೆ ಒಂದು ತಿಂಗಳ ಲಾಕ್ಡೌನ್ ಜಾರಿಯಲ್ಲಿದೆ. ಕೊರೊನಾ ವೈರಸ್ ಬಂದ ಮೇಲೆ ಎರಡನೇ ಬಾರಿಗೆ ಲಾಕ್ಡೌನ್ ಮಾಡಲಾಗಿದೆ. ಈ ಸಮಯದಲ್ಲಿ, ಸೂಪರ್‌ಮಾರ್ಕೆಟ್‌ಗಳು ಮತ್ತು ಶಾಲೆಗಳು ತೆರೆದಿರಲಿವೆ.